ಕ.ಸಾ.ಪ.ದಿಂದ ಕೆ.ಟಿ. ಗಟ್ಟಿ ನುಡಿನಮನ

ಕಾಸರಗೋಡು: ಸಾಮಾನ್ಯ ಹಿನ್ನೆಲೆಯಿಂದ ಬಂದು ಎಂಟನೇ ತರಗತಿವರೆಗೆ ಮಾತ್ರ ಕಲಿತ ಕೆ.ಟಿ ಗಟ್ಟಿಯವರು ಅದೃಷ್ಟವನ್ನೇ ನಂಬಿ ಕೂರದೆ ಅನನ್ಯ ಸಾಧನೆಯಿಂದಲೇ ಮೇಲೆ ಬಂದವರು. ಸತತ ಪರಿಶ್ರಮ ಪಟ್ಟು ಖಾಸಗಿಯಾಗಿ ಶಿಕ್ಷಣ ಮುಂದುವರಿಸಿ ಪದವಿ,ಸ್ನಾತಕೋತ್ತರ ಪದವಿ ಪಡೆದು ಕನ್ನಡ, ಇಂಗ್ಲೀಷ್ ಭಾಷೆಗಳಲ್ಲಿ ಪ್ರಾವೀಣ್ಯ ಗಳಿಸಿ ಹಲವು ವರ್ಷಗಳ ಕಾಲ ವಿದೇಶದಲ್ಲಿ ಆಂಗ್ಲ ಲ್ರ‍್ಭÃಫೆಸರ್ ಆಗಿ ಸೇವೆ ಸಲ್ಲಿಸಿದರು. ೪೦ರಷ್ಟು ಕಾದಂಬರಿಗಳನ್ನು ಕನ್ನಡಕ್ಕೆ ನೀಡಿದರು. ಅವರ ಈ ಸಾಧನೆ ಅನನ್ಯವಾದುದು, ಮಾದರಿಯಾದುದು ಎಂದು ಕಾಸರಗೋಡು ಸರಕಾರಿ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಕಮಲಾಕ್ಷ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕಾಸರಗೋಡಿನ ಸಾಹಿತ್ಯ ಪರಿಷತ್ ಕಚೆÃರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕೆ.ಟಿ ಗಟ್ಟಿ ಅವರಿಗೆ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಗಮಕ ಕಲಾಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೇಕೆರೆ ಶಂಕರ ನಾರಾಯಣ ಭಟ್, ಬಿ.ರಾಮಮೂರ್ತಿ,ಬಿ.ನರಸಿಂಗ ರಾವ್ ನುಡಿ ನಮನ ಸಲ್ಲಿಸಿದರು.
ಸಾಹಿತಿ ವೈ. ಸತ್ಯನಾರಾಯಣ, ಕಾಸರಗೋಡು ಚಿನ್ನಾ, ವೀಜಿ ಕಾಸರ ಗೋಡು, ನ್ಯಾ. ಥೋಮಸ್ ಡಿ’ಸೋಜ, ಸುಕುಮಾರ ಆಲಂಪಾಡಿ, ಕೆ.ಸತ್ಯನಾರಾಯಣ ತಂತ್ರಿ, ಗಣೇಶ ಪ್ರಸಾದ್ ಪಾಣೂರು, ಜೋನ್ ಡಿ’ ಸೋಜ, ಸುಮಿತ್ರ ಎರ್ಪಕಟ್ಟೆ,ಪುನೀತ್ ಕೃಷ್ಣ,ಜಯರಾಜ್ ಉಪಸ್ಥಿತರಿದ್ದರು. ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಸ್ವಾಗತಿಸಿ, ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ರಾಮಚಂದ್ರ ಭಟ್ ಧರ್ಮತ್ತಡ್ಕ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page