ಗಣೇಶ್ ಕುಮಾರ್, ಕಡನ್ನಪಳ್ಳಿ ಇಂದು ಸಂಜೆ ಸಚಿವರಾಗಿ ಪ್ರಮಾಣವಚನ

ತಿರುವನಂತಪುರ: ಕೇರಳ ಕಾಂಗ್ರೆಸ್ (ಬಿ) ಅಧ್ಯಕ್ಷ ಕೆ.ಬಿ. ಗಣೇಶ್ ಕುಮಾರ್ ಮತ್ತು ಕಾಂಗ್ರೆಸ್ ಎಸ್ ಅಧ್ಯಕ್ಷ ಕಡನ್ನ ಪಳ್ಳಿ ರಾಮಚಂದ್ರನ್ ಅವರು ಇಂದು ಸಂಜೆ ೪ ಗಂಟೆಗೆ ರಾಜ್ ಭವನದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ  ಸಚಿವರುಗಳಾಗಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್‌ರಿಂದ ಪ್ರಮಾಣವಚನ ಸ್ವೀಕರಿಸುವರು.

ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು. ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ  ಪರಸ್ಪರ ಗುದ್ದಾಟದಲ್ಲಿ ತೊಡಗಿರುವ ರಾಜ್ಯ ಪಾಲರು ಮತ್ತು ಮುಖ್ಯಮಂತ್ರಿಯವರು ಇಂದು ನಡೆಯಲಿರುವ ಈ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವಿಶೇಷತೆಯನ್ನೂ ಇದು ಹೊಂದಿದೆ.

Leave a Reply

Your email address will not be published. Required fields are marked *

You cannot copy content of this page