ಗಾಂಧಿ ಜಯಂತಿ: ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಗಣ್ಯರಿಂದ ನಮನ

ನವದೆಹಲಿ: ಮಹಾತ್ಮಾಗಾಂಧಿ ಅವರ ೧೫೪ನೇ  ಜನ್ಮ ದಿನವನ್ನು ಇಂದು ದೇಶಾದ್ಯಂತ ಶುಚಿತ್ವ ಅಭಿ ಯಾನ ಇತ್ಯಾದಿ ವಿಶೇಷ ಕಾರ್ಯಕ್ರಮ ಗಳೊಂದಿಗೆ ಆಚರಿಸಲಾಗುತ್ತಿದೆ.

ಜನ್ಮ ದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರಮೋದಿ, ಇತರ  ಹಲವು ಗಣ್ಯರು ಇಂದು ದೆಹಲಿಯ ರಾಜ್‌ಘಾಟ್‌ಗೆ ತೆರಳಿ ಗಾಂಧಿ ಸ್ಮಾರಕಕ್ಕೆ ಪುಷ್ಪಾರ್ಚನೆ ನಡೆಸಿ ನಮನ ಸಲ್ಲಿಸಿದರು.

ಮಹಾತ್ಮಾಗಾಂಧಿಯವರ  ಕಾಲಾತೀತ ಬೋಧನೆಗಳು ನಮ್ಮ ಮಾರ್ಗವನ್ನು ಬೆಳಗಿಸುತ್ತಲೇ ಇರುತ್ತದೆ. ಅವರ ಕನಸು ನನಸಾಗಲು ನಾವು ಯಾವಾಗಲೂ ಕೆಲಸ ಮಾಡೋಣ. ಅವರ ಆಲೋಚನೆಗಳು ಪ್ರತಿಯೊಬ್ಬ ಯುವಕರು ಕಂಡ ಕನಸಿಗೆ ದಾರಿದೀಪವಾಗಲಿ. ಎಲ್ಲೆಡೆಗಳಲ್ಲಿ  ಏಕತೆ ಮತ್ತು ಸೌಹಾರ್ದತೆಯನ್ನು ಬೆಳೆಸಿಕೊಳ್ಳಿ ಎಂದು ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ನೀಡಿದ ಸಂದೇಶದಲ್ಲಿ ತಿಳಿಸಿದರು.

ಇಂದು ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮ ದಿನವೂ ಆಗಿದ್ದು, ಆ ಹಿನ್ನೆಲೆಯಲ್ಲಿ ವಿಜಯ್ ಘಾಟ್‌ನಲ್ಲಿ ಅವರ ಸ್ಮಾರಕಕ್ಕೂ ಪ್ರಧಾನಿ ಪುಷ್ಪಾರ್ಚನೆ ನಡೆಸಿದರು.

Leave a Reply

Your email address will not be published. Required fields are marked *

You cannot copy content of this page