ಗೃಹಿಣಿಗೆ ದೌರ್ಜನ್ಯ: ವಾಟರ್ ಅಥೋರಿಟಿ ನೌಕರ ಸೆರೆ
ಕಾಸರಗೋಡು: 46ರ ಹರೆಯದ ಯುವತಿ ಮೇಲೆ ದೌರ್ಜನ್ಯವೆಸಗಿದ ಆರೋಪದಂತೆ 39ರ ಹರೆಯದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ರಾಜಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯೂ, ಪ್ರಸ್ತುತ ಮಾವುಂಗಾಲ್ ಆನಂದಾಶ್ರಮ ಸಮೀಪ ವಾಸಿಸುವ ರಂಜಿತ್ (39) ಸೆರೆಗೀಡಾದ ವ್ಯಕ್ತಿ. ಈತ ಕಾಞಂಗಾ ಡ್ ವಾಟರ್ ಅಥೋರಿಟಿಯಲ್ಲಿ ಚಾಲಕನಾಗಿದ್ದಾನೆ. ಉದ್ಯೋಗ ಲಭಿಸಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಜಪುರದಿಂದ ಆನಂದಾಶ್ರಮ ಸಮೀಪಕ್ಕೆ ವಾಸ ಬದಲಿಸಿದ್ದನು. ರಾಜಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಗೃಹಿಣಿ ಮೇಲೆ ಈತ ದೌರ್ಜನ್ಯವೆಸಗಿರು ವುದಾಗಿ ದೂರಲಾಗಿದೆ.