ಚುನಾವಣಾ ದಿನದಂದೇ ಛತ್ತೀಸ್‌ಗಡ್‌ನಲ್ಲಿ ಮಾವೋವಾದಿಗಳಿಂದ ಬಾಂಬ್ ಸ್ಫೋಟ: ಯೋಧನಿಗೆ ಗಾಯ

ನವದೆಹಲಿ: ಮಿಝೋರಾಂನ ಎಲ್ಲಾ  ಹಾಗೂ ಛತ್ತೀಸ್‌ಗಡ ವಿಧಾನಸಭೆಯ ೨೦ ಸ್ಥಾನಗಳಿಗಿರುವ  ಚುನಾವಣೆಗಿರುವ ಮತದಾನ ಇಂದು ಬೆಳಿಗ್ಗೆ ಆರಂಭಗೊಂಡಿರುವಂತೆಯೇ ಛತ್ತೀಸ್‌ಗಡದ ಸುಕ್ಮಾದ ತೊಂಡಮಾರ್ಕಾ ಪ್ರದೇಶದಲ್ಲಿ ಮಾವೋವಾದಿಗಳು ಇಂದು ಬೆಳಿಗ್ಗೆ  ಐಇಡಿ ಸ್ಫೋಟ ನಡೆಸಿದ್ದು, ಅದರಲ್ಲಿ ಸಿಆರ್‌ಪಿಎಫ್ ಕೊಬ್ರಾ ಬೆಟಾಲಿಯನ್‌ನ ಓರ್ವ ಯೋಧ ಗಾಯಗೊಂಡಿದ್ದಾರೆ. ಇವರನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿತ್ತು.

ಛತ್ತೀಸ್‌ಗಡದಲ್ಲಿ  ೨೦ ವಿಧಾನಸಭಾ ಕ್ಷೇತ್ರಗಳಿಗೆ ಇಂದು ಬೆಳಿಗ್ಗೆ ಮತದಾನ ಆರಂಭಗೊಂಡಿದ್ದು, ಇದರಲ್ಲಿ ೧೨ ಪರಿಶಿಷ್ಟ ಪಂಗಡ ಮತ್ತು ಒಂದು ಪರಿಶಿಷ್ಟ ಜಾತಿಗೆ ಮೀಸಲಿರಿಸಿದೆ. ಮಾತ್ರವಲ್ಲ ಇದು ಸದಾ ಮಾವೋವಾದಿ ಬೆದರಿಕೆ ಹೊಂದಿರುವ  ಪ್ರದೇಶಗಳಾಗಿವೆ. ಆದ್ದರಿಂದ ಈ ಪ್ರದೇಶಗಳಲ್ಲಿ  ಕೇಂದ್ರೀಯ ಪಡೆಗಳ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page