ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಸಿಪಿಎಂ ಜಿಲ್ಲಾ ಕಾರ್ಯದರ್ಶಿಗೆ ನೋಟೀಸು ಜ್ಯಾರಿ

ಕಾಸರಗೋಡು: ಲೋಕಸಭಾ ಚುನಾವಣೆ ೨೦೨೪ರ ಚುನಾವಣೆಗೆ ಸಂಬಂಧಿಸಿದ ಕೇಂದ್ರ ಚುನಾವಣಾ ಆಯೋಗದ ಮಾದರಿ ನೀತಿ ಸಂಹಿv ಯನ್ನು ಉಲ್ಲಂಘಿಸಿರು ವುದಾಗಿ ತೋರಿಸಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿಯ ಉಸ್ತುವಾರಿ ಹೊಣೆಗಾರಿಕೆ ಹೊಂದಿರುವ  ಶಾಸಕ ಸಿ.ಎಚ್. ಕುಂಞಂಬುರಿಗೆ  ಆ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ನಿರ್ದೇಶಿಸಿ ಚುನಾವಣಾ ಆಯೋಗ ನೋಟೀಸು ಜ್ಯಾರಿಗೊಳಿಸಿದೆ. ಮಾದರಿ ನೀತಿ ಸಂಹಿ ತೆಯ ನೋಡಲ್ ಅಧಿಕಾರಿಯಾಗಿರುವ ಸಬ್ ಕಲೆಕ್ಟರ್ ಸೂಫಿಯಾನ್ ಅಹಮ್ಮದ್‌ರವರು ಈ ನೋಟೀಸ್ ಜ್ಯಾರಿಗೊಳಿಸಿದ್ದಾರೆ. ಅನುಮತಿ ಪಡೆಯದೆ ರೋಡ್ ಶೋ ನಡೆಸುವಿಕೆ, ಧ್ವನಿವರ್ಧಕ ಬಳಸುವಿಕೆ, ವಾಹನಗಳನ್ನು ಉಪಯೋ ಗಿಸುವಿಕೆ ಇತ್ಯಾದಿ ಕಾರಣಗಳನ್ನು ನೀಡಿ ಈ ನೋಟೀಸ್ ಜ್ಯಾರಿಗೊಳಿಸಲಾಗಿದೆ.

ನೋಟೀಸ್ ಲಭಿಸಿದ ೪೮ ತಾಸು ಗಳೊಳಗಾಗಿ ಅದಕ್ಕೆ ಸ್ಪಷ್ಟೀಕರಣೆ ನೀಡ ಬೇಕೆಂದೂ ನೋಟೀಸಿನಲ್ಲಿ ಸ್ಪಷ್ಟಪಡಿಸ ಲಾಗಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಪ್ರಕಾರ, ಮುಂಗಡ ಅನುಮತಿ ಪಡೆಯದೆ ಯಾವುದೇ ರಾಜಕೀಯ ಪಕ್ಷಗಳು ರೋಡ್‌ಶೋ ನಡೆಸುವಂತಿಲ್ಲ. ಮಾತ್ರವಲ್ಲ ರೋಡ್ ಶೋ ನಡೆಸುವ ಹಾಗಿದ್ದಲ್ಲಿ ಅದಕ್ಕೆ ಮುಂಗಡ ಅನುಮತಿ ಪಡೆದಿರಬೇಕು. ಅದರಲ್ಲಿ ಭಾಗವಹಿಸುವ ವಾಹನಗಳು ಮತ್ತು ವ್ಯಕ್ತಿಗಳ ಸಂಖ್ಯೆಯನ್ನೂ ಮುಂಗಡವಾಗಿ ತಿಳಿಸಿರಬೇಕು. ಮಕ್ಕಳನ್ನು ರೋಡ್ ಶೋನಲ್ಲಿ ಪಾಲ್ಗೊಳ್ಳಿ ಸುವಂತಿಲ್ಲ. ರೋಡ್ ಶೋನಲ್ಲಿ ಸಾಕು ಪ್ರಾಣಿ ಯಾ ಇತರ ಪ್ರಾಣಿಗಳ ಪ್ರದರ್ಶನಕ್ಕೂ ನಿಷೇಧ ಹೇರಲಾಗಿದೆ. ಮುಂಗಡ ಅನುಮತಿ ಪಡೆಯದೆ ಧ್ವನಿವರ್ಧ ಕಗಳನ್ನು ಬಳಸು ವಂತಿಲ್ಲ. ರೋಡ್‌ಶೋಗಳಿಗೆ ಉಪಯೋ ಗಿಸುವ ವಾಹನಗಳ ರಿಜಿಸ್ಟ್ರೇಷನ್ ನಂಬ್ರ ಗಳನ್ನು ಮುಂಗಡವಾಗಿ ಸಂಬಂಧಪಟ್ಟ  ಅಧಿಕಾರಿಗಳಿಗೆ ನೀಡಿ ಅದಕ್ಕೂ ಮುಂಗಡ ಅನುಮತಿ ಪಡೆಯಬೇಕಾಗಿದೆ. ನೈಜ ರೂಪ ಬದಲಾಯಿಸಿದ ವಾಹನಗಳನ್ನು ಇದಕ್ಕೆ ಉಪ ಯೋಗಿಸಬಾರದೆಂಬ ನಿಬಂಧನೆಯನ್ನೂ ಹೇರಲಾಗಿದೆ.

Leave a Reply

Your email address will not be published. Required fields are marked *

You cannot copy content of this page