ಚುನಾವಣೆ: ಕಾಳಧನ ಹರಿದುಬರುವಿಕೆ ತಡೆಗಟ್ಟಲು ಆದಾಯ ತೆರಿಗೆ ಇಲಾಖೆಯ ವಿಶೇಷ ಸ್ಕ್ವಾಡ್‌ಗಳು ರಂಗಕ್ಕೆ

ಕಾಸರಗೋಡು: ಲೋಕಸಭಾ ಚುನಾವಣೆ ವೇಳೆ ಆರ್ಥಿಕ ಆಮಿಷ ವೊಡ್ಡಿ ಮತದಾರರನ್ನು ತಮ್ಮ ಬುಟ್ಟಿ ಯೊಳಗಾಗಿಸುವವರನ್ನು ಪತ್ತೆಹಚ್ಚಿ ಅದನ್ನು ತಡೆಗಟ್ಟಲು ಆದಾಯ ತೆರಿಗೆ  ಇಲಾಖೆಯ ವಿಶೇಷ ಸ್ಕ್ವಾಡ್‌ಗಳು ರಾಜ್ಯದಲ್ಲಿ ರಂಗಕ್ಕಿಳಿದು ಕಾರ್ಯಾಚರಣೆ ಆರಂಭಿಸಿದೆ. ಇದರಂತೆ ಜಿಲ್ಲಾ ಮಟ್ಟಗಳಲ್ಲೂ ಇಂತಹ ಸ್ಕ್ವಾಡ್‌ಗಳಿಗೆ ರೂಪು ನೀಡಲಾಗಿದೆ. ಆಯಾ ಜಿಲ್ಲಾಡಳಿತ, ಪೊಲೀಸರು ಮತ್ತಿತರ ತನಿಖಾ ಸಂಸ್ಥೆಗಳ ಸಹಕಾರದೊಂದಿಗೆ ಸ್ಕ್ವಾಡ್‌ಗಳು ಕಾರ್ಯವೆಸಗುತ್ತಿವೆ.

ವ್ಯಕ್ತಿಗಳು ಸ್ವಂತ ಅಗತ್ಯಗಳಿಗಾಗಿ ಹಣದೊಂದಿಗೆ ಸಾಗಲು ಯಾವುದೇ ರೀತಿಯ ಅಡಚಣೆ ನೀಡಲಾಗುವುದಿಲ್ಲ. ಆದರೆ ಹೀಗೆ ಸಾಗಿಸಲಾಗುವ ಹಣಕ್ಕೆ ಅಧಿಕೃತ ದಾಖಲುಪತ್ರಗಳನ್ನು ಕೈವಶವಿರಿ ಸಿಕೊಳ್ಳಬೇಕಾಗಿದೆ. ಬ್ಯಾಂಕ್ ಮೂಲಕ ನಡೆಸುವ ಬೃಹತ್ ಮೊತ್ತದ ಆರ್ಥಿಕ ವ್ಯವಹಾರಗಳ ಮೇಲೆ ತೀವ್ರ  ನಿಗಾ ಇರಿಸ ಲಾಗುವುದು. ಚುನಾವಣೆ ವೇಳೆ ಕಾಳಧನ ವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ಕೊಚ್ಚಿಯನ್ನು ಕೇಂದ್ರೀಕರಿಸಿ ದೈನಂದಿನ ೨೪ ತಾಸುಗಳು ಕಾರ್ಯವೆಸಗುವ ವಿಶೇಷ ಕಂಟ್ರೋಲ್ ರೂಮ್  ತೆರೆಯಲಾಗಿದೆ. ಕಾಳಧನ ವ್ಯವಹಾರದ ಬಗ್ಗೆ ಸಾರ್ವಜ ನಿಕರೂ ಈ ಕೇಂದ್ರಕ್ಕೆ ಮಾಹಿತಿ ನೀಡಬ ಹುದು. ಹೀಗೆ ಮಾಹಿತಿ ನೀಡುವವರ ಹೆಸರು ಮತ್ತಿತರ ಮಾಹಿತಿಗಳನ್ನು ಗೌಪ್ಯವಾಗಿ ಇರಿಸಲಾಗುವುದದೆಂದು ಕೊಚ್ಚಿ ಇನ್‌ಕಂ ಟ್ಯಾಕ್ಸ್ ಡೈರೆಕ್ಟರ್ ಜನರಲ್ (ಇನ್‌ವೆ ಸ್ಟಿಗೇಷನ್ಸ್) ದೇಬ್ ಜ್ಯೋತಿ ದಾಸ್ ತಿಳಿಸಿದ್ದಾರೆ. ಹೀಗೆ ಗುಪ್ತ ಮಾಹಿತಿ ನೀಡಲು  ೧೮೦೦ ೪೨೫ ೩೧೭೩ ಟೋಲ್ ಫ್ರೀ ನಂಬ್ರ ಸೌಕರ್ಯವನ್ನು ಏರ್ಪಡಿಸಲಾಗಿದೆ. ಇದರ ಹೊರತಾಗಿ ೮೭೧೪೯೩೬೧೧೧  ಎಂಬ ನಂಬ್ರದ ವಾಟ್ಸಪ್ ಮೂಲಕವೂ ಮಾಹಿತಿ ನೀಡಬ ಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page