ಚುನಾವಣೆ: ಸ್ವೀಪ್‌ನಿಂದ ಮೆಹಂದಿ ಸ್ಪರ್ಧೆ

ಕಾಸರಗೋಡು: ಲೋಕಸಭಾ ಚುನಾವಣೆಯ ಪ್ರಚಾರ ಚಟುವಟಿಕೆ ಗಳಂಗವಾಗಿ ಸ್ವೀಪ್‌ನ ನೇತೃತ್ವದಲ್ಲಿ ಜಿಲ್ಲಾಮಟ್ಟದ ಮೆಹಂದಿ ಸ್ಪರ್ಧೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ವಿವಿಧ ಪಂಚಾ ಯತ್‌ಗಳಿಂದ ೧೭ ತಂಡಗಳು ಭಾಗವಹಿಸಿವೆ. ಅಸಿಸ್ಟೆಂಟ್ ಕಲೆಕ್ಟರ್ ದಿಲೀಪ್ ಕೈನಿಕ್ಕರ ಉದ್ಘಾಟಿಸಿದರು. ಸ್ವೀಪ್ ನೋಡೆಲ್ ಆಫೀಸರ್ ಟಿ.ಟಿ. ಸುರೇಂದ್ರನ್ ಅಧ್ಯಕ್ಷತೆ ವಹಿಸಿದರು. ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ಚುನಾವಣೆ ಡೆಪ್ಯೂಟಿ ಕಲೆಕ್ಟರ್ ಪಿ. ಅನಿಲ್, ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್, ಇಲೆಕ್ಷನ್ ಜ್ಯೂನಿಯರ್ ಸುಪರಿಂಟೆಂಡೆಂಟ್ ಜಿ.ಕೆ. ಸುರೇಶ್‌ಬಾಬು ವಿತರಿಸಿದರು. ಕುಟುಂಬಶ್ರೀ ಎಡಿಎಂಸಿ ಸಿ.ಎಚ್. ಇಕ್ಬಾಲ್, ಜಿಲ್ಲಾ ಪ್ರೋಗ್ರಾಂ ಮೆನೇಜರ್ ಎಂ. ರೇಶ್ಮಾ, ಇ. ಶಿಬಿ, ಪಿ. ರತ್ನೇಶ್, ಯದುರಾಜ್ ಭಾಗವಹಿಸಿದರು. ಚೆಂಗಳ ಪಂ.ನ ಖದೀಜತ್ ಸುಹೈಲ, ಸೈನಬ ಅಹಮ್ಮದ್ ಪ್ರಥಮ ಸ್ಥಾನ, ಮುಶ್ರಫ್, ಹಾಜಿರ, ದ್ವಿತೀಯ ಸ್ಥಾನ, ಕುಂಬಳೆ ಪಂ.ನ ಹಫೀಫ್, ಇಫ್ ತೃತೀಯ ಸ್ಥಾನ ಗಳಿಸಿದರು.

RELATED NEWS

You cannot copy contents of this page