ಜಪ್ತಿ ಬೆದರಿಕೆ: ಎಂಡೋಸಲ್ಫಾನ್ ಸಂತ್ರಸ್ತೆಯ ಕುಟುಂಬಕ್ಕೆ ಶಾಸಕರಿಂದ ಅಭಯ
ಮಂಜೇಶ್ವರ: ಜಪ್ತಿ ಬೆದರಿಕೆ ಹಿನ್ನೆಲೆಯಲ್ಲಿ ಆತಂಕಕ್ಕೀಡಾಗಿದ್ದ ಕುಟುಂಬಕ್ಕೆ ಶಾಸಕರಿಂದ ಅಭಯ. ಎಂಡೋಸಲ್ಫಾನ್ ಸಂತ್ರಸ್ತೆಯಾದ ಮೀಂಜ ಪಂಚಾಯತ್ ಬಾಳ್ಯೂರು ನಿವಾಸಿ ತೀರ್ಥ ಎಂಬವರ ಕುಟುಂಬದ ಸಾಲದ ಹೊಣೆಯನ್ನು ವಹಿಸಿದ ಶಾಸಕ ಎಕೆಎಂ ಅಶ್ರಫ್ ಕುಟುಂಬದ ಕಣ್ಣೀರೊರೆಸಿದ್ದಾರೆ.
ಕಾರವಲ್ ಆನ್‌ಲೈನ್‌ನಲ್ಲಿ ಸುದ್ಧಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಶಾಸಕರು ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಸಾಲದ ಬಗ್ಗೆ ತಿಳಿದುಕೊಂಡು ಅದನ್ನು ಪಾವತಿಸುವ ಭರವಸೆ ನೀಡಿ ದರು. ಈ ಬಗ್ಗೆ ಬ್ಯಾಂಕ್ ಅಧಿಕಾರಿ ಗಳೊಂದಿಗೆ ಶಾಸಕರು ಮಾತುಕತೆ ನಡೆಸಿ ಗರಿಷ್ಠ ರಿಯಾಯಿತಿ ಲಭಿಸುವಂತೆ ಮಾಡಿದರು.
ಕೇರಳ ಗ್ರಾಮೀಣ ಬ್ಯಾಂಕ್ ಬಾಳ್ಯೂರು ಶಾಖೆಯಿಂದ ಕುಟುಂಬ ಸಾಲ ಪಡೆದಿತ್ತು. ಅದನ್ನು ಕೋವಿಡ್ ವರೆಗೂ ಮರು ಪಾವತಿಸುತ್ತಿ ದ್ದರು. ಆದರೆ ಆ ಬಳಿಕ ಕಂತು ಮೊಟ ಕಾಗಿದ್ದು, ಈ ಹಿನ್ನೆಲೆಯಲ್ಲಿ ಬಡ್ಡಿ ಸಹಿತ ಅದು ೬ ಲಕ್ಷ ರೂ.ಗೇರಿತ್ತು. ಈ ಹಿನ್ನೆಲೆಯಲ್ಲಿ ಮನೆಯನ್ನು ಜಪ್ತಿ ಮಾಡಿ ಮಾರಾಟಕ್ಕಾಗಿ ಬ್ಯಾಂಕ್ ಅಧಿಕಾರಿಗಳು ನೋಟೀಸು ಹಚ್ಚಿದ್ದರು. ಈ ಹಿನ್ನೆಲೆ ಯಲ್ಲಿ ಮುಖ್ಯಮಂತ್ರಿ, ಜಿಲ್ಲಾಧಿಕಾರಿ ಸಹಿತ ಜಪ್ತಿ ಕ್ರಮವನ್ನು ಹೊರತುಪಡಿ ಸಬೇಕೆಂದು ಆಗ್ರಹಿಸಿ ಕುಟುಂಬ ಮನವಿ ನೀಡಿತ್ತು. ಈ ಮಧ್ಯೆ ಶಾಸಕರು ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಾಲದಲ್ಲಿ ರಿಯಾಯಿತಿ ಪಡೆದು ಅದನ್ನು ಸಂಪೂರ್ಣ ಪಾವತಿಸಿ ಚುಕ್ತ ಮಾಡುವುದಾಗಿ ಕುಟುಂಬಕ್ಕೆ ಭರವಸೆ ನೀಡಿದ್ದಾರೆ. ಶಾಸಕರ ಈ ನಡೆ ಜನರೆಡೆಯಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.