ಜಲಸಂಗ್ರಹಾಲಯಕ್ಕೆ ಮಣ್ಣು ತುಂಬಿಸಿ ಪ್ರಕೃತಿಗೆ ಹಾನಿ: ನೀರ್ಚಾಲು ಬಳಿ ಕೈಗಾರಿಕಾ ಉದ್ಯಾನ ವಿರುದ್ಧ ನಾಗರಿಕರು ಹೋರಾಟ ರಂಗಕ್ಕೆ
ನೀರ್ಚಾಲು: ಪ್ರಕೃತಿಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ಚಟು ವಟಿಕೆ ಆರಂಭಿಸಿದ ಕೈಗಾರಿಕಾ ಉದ್ಯಾನದ ವಿರುದ್ಧ ನಾಗರಿಕರು ಪ್ರತಿ ಭಟನೆ ಯೊಂದಿಗೆ ರಂಗಕ್ಕಿಳಿದಿದ್ದಾರೆ.
ನೀರ್ಚಾಲು ಸಮೀಪ ಮೊಳೆಯಾರಿನ ಕೃಷಿ ವಲಯದ ಜನವಾಸ ಕೇಂದ್ರದಲ್ಲಿ ಆರಂಭಿಸಿದ ಮುಂಡೋಳ್ ಕೈಗಾರಿಕಾ ಉದ್ಯಾನ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ. ನೀರ್ಚಾಲು ಗ್ರಾಮದ 182/2, 182 ಬೇಳ, ಬೇಳ ಗ್ರಾಮದ 12 ಎಕರೆ ಸ್ಥಳದಲ್ಲಿ ಕೈಗಾರಿಕಾ ಉದ್ಯಾನಕ್ಕಿರುವ ಸ್ಥಳ ಗೊತ್ತುಪಡಿಸಿ ರಿಜಿಸ್ಟ್ರೇಶನ್ ಕ್ರಮಗಳನ್ನು ಪೂರ್ತಿ ಗೊಳಿಸಲಾಗಿದೆ. ಮಣ್ಣು ಹಾಗೂ ಜಲಸಂರಕ್ಷಣೆಯನ್ನು ಕಾಪಾಡಿಕೊಂಡು ಬರಬೇಕೆಂಬ ಕಾಯ್ದೆ ಜಾರಿಯಲ್ಲಿರು ವಾಗಲೇ ಕೃಷಿಕರು ಉಪಯೋಗಿ ಸುತ್ತಿರುವ ಜಲಸಂಗ್ರಹಗಾರಕ್ಕೆ ಮಣ್ಣು ತುಂಬಿಸಿ ಕೈಗಾರಿಕಾ ಉದ್ಯಾನದ ಚಟುವಟಿಕೆ ಆರಂಭಿಸಲಾಗಿದೆ. ಬೇಸಿಗೆ ಕಾಲದಲ್ಲಿ ಮಾರ್ಚ್, ಎಪ್ರಿಲ್ ತಿಂಗಳಲ್ಲೂ ಅಲ್ಲಿನ ಮೂರು ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಕೃಷಿ ಸ್ಥಳಕ್ಕೆ ಅಗತ್ಯವುಳ್ಳ ನೀರು ಹರಿದುಬರುವ ಚರಂಡಿಗೆ ಮಣ್ಣು ತುಂಬಿಸಿ ಚರಂಡಿ ಯನ್ನು ಇಲ್ಲದಾಗಿಸ ಲಾಗಿದೆಯೆಂದು ದೂರಲಾಗಿದೆ.
ಒಂದು ಭಾಗದಲ್ಲಿ ನೀರು ಸಂಗ್ರಹಾಲಯವನ್ನು ಮಣ್ಣು ತುಂಬಿಸಿ ಮುಚ್ಚಿದ್ದು, ಮತ್ತೊಂದು ಭಾಗದಲ್ಲಿ ರಾಸಾಯನಿಕ ವಸ್ತು ಬಳಸಿ ಉತ್ಪಾದಿ ಸುವ ಕೆಮಿಕಲ್ ಫ್ಯಾಕ್ಟರಿಯಿಂದಾಗಿ ಪ್ರಕೃತಿಯನ್ನು ನಾಶಗೊಳಿಸುವ ರೀತಿಯ ಸಂಸ್ಥೆಗಳನ್ನು ಇಲ್ಲಿ ಆರಂಭಿ ಸುವುದಾಗಿಯೂ ಇದರಿಂದ ಕೃಷಿ ವಲಯ ನಾಶಕ್ಕೂ ಕಾರಣವಾಗಲಿ ದೆಯೆಂದು ಅಲ್ಲಿನ ಕೃಷಿಕರ ಸಹಿತ ನಾಗರಿಕರು ತಿಳಿಸುತ್ತಿದ್ದಾರೆ. ಆದ್ದರಿಂದ ಇಂತಹ ಕೈಗಾರಿಕೆಯನ್ನು ಯಾವುದೇ ಬೆಲೆ ತೆತ್ತಾದರೂ ತಡೆಯುವುದಾಗಿ ನಾಗರಿಕರು ತಿಳಿಸಿದ್ದಾರೆ. ಇದಕ್ಕಾಗಿ ಗಣೇಶ್ ಅಳಕ್ಕೆ ಅಧ್ಯಕ್ಷರಾಗಿರುವ ಪ್ರಕೃತಿ ಸಂರಕ್ಷಣಾ ಸಮಿತಿ ರೂಪೀಕರಿಸಲಾಗಿದೆ. ಕೈಗಾರಿಕಾ ಉದ್ಯಾನದಿಂದ ಉಂಟಾಗುವ ಹಾನಿಯ ಕುರಿತು ಜಿಲ್ಲಾಧಿಕಾರಿ, ಕೃಷಿ ಇಲಾಖೆಯ, ಉದ್ದಿಮೆ, ಕಂದಾಯ ಹಾಗೂ ಸ್ಥಳೀಯಾಡಳಿತ ಇಲಾಖೆಗೆ ಸಮಿತಿ ದೂರು ನೀಡಿದೆ.