ಜಿಲ್ಲಾ ಮೊಗೇರ ದೈವಾರಾಧಕರ ಒಕ್ಕೂಟ ಸಮಾಲೋಚನ ಸಭೆ 22ರಂದು

ಬದಿಯಡ್ಕ: ಕಾಸರಗೋಡು ಜಿಲ್ಲಾ ಮೊಗೇರ ದೈವಾರಾಧಕರ ಒಕ್ಕೂಟದ ಸಮಾಲೋಚನ ಸಭೆ ಈ ತಿಂಗಳ 22ರಂದು ಬೆಳಿಗ್ಗೆ 10 ಗಂಟೆಗೆ ಉಪ್ಪಳ ಪಚ್ಲಂಪಾರೆ ಬ್ರಹ್ಮಶ್ರೀ ಮೊಗೇರ ಮಹಾಂಕಾಳಿ ದೈವಸ್ಥಾನದಲ್ಲಿ ನಡೆಯಲಿದೆ. ಒಕ್ಕೂಟದ ಅಧ್ಯಕ್ಷ ರಾಮಪ್ಪ ಮಂಜೇಶ್ವರ ಅಧ್ಯಕ್ಷತೆ ವಹಿಸುವರು. ಹಿರಿಯ ದೈವ ಪಾತ್ರಿಗಳು ಉದ್ಘಾಟಿಸುವರು. ವಿಜಯ ವಿಕ್ರಮ್ ರಾಮಕುಂಜ ವಿಷಯ ಮಂಡಿಸುವರು. ಒಕ್ಕೂಟದ ಗೌರವಾಧ್ಯಕ್ಷ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಕೋಶಾಧಿಕಾರಿ ಗೋಪಾಲ ದರ್ಬೆತ್ತಡ್ಕ, ಪ್ರಧಾನ ಸಂಚಾಲಕ ಬಾಬು ಪಚ್ಲಂಪಾರೆ, ಆದರ್ಶ ಪಟ್ಟತ್ತಮೊಗರು ಭಾಗವಹಿಸುವರು.

You cannot copy contents of this page