ಜೀಪು-ಸ್ಕೂಟರ್ ಢಿಕ್ಕಿ ವಿದ್ಯಾರ್ಥಿ ಮೃತ್ಯು
ಉಪ್ಪಳ: ಜೀಪ್ ಹಾಗೂ ಸ್ಕೂಟರ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ವಿದ್ಯಾರ್ಥಿ ಮೃತಪಟ್ಟಿದಾನೆ. ಪೈವಳಿಕೆ-ಚೇವಾರ್ ರಸ್ತ್ತೆ ಸಂಗಮಿಸುವ ಜಂಕ್ಷನ್‌ನಲ್ಲಿ ಅಪಘಾತ ನಡೆದಿದೆ. ಲಾಲ್‌ಬಾಗ್ ಸಮೀಪದ ಪಾಕ ನಿವಾಸಿ ವ್ಯಾಪಾರಿ ಇಬ್ರಾಹಿಂ ಮೊಯ್ದೀನ್‌ರ ಪುತ್ರ ವಿದ್ಯಾರ್ಥಿ ಮೊಯಿದೀನ್ ಇಪ್ರಾಝ್ (೧೬) ಮೃತಪಟ್ಟಿದ್ದಾನೆ. ಈತ ಉಪ್ಪಳ ಖಾಸಗಿ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿಯಾಗಿ ದ್ದಾನೆ. ಶನಿವಾರ ರಾತ್ರಿ ೧೦.೩೦ರ ವೇಳೆ ಮನೆಯಿಂದ ಬಾಯಿಕಟ್ಟೆ ಸಮೀಪದ ಮಸೀದಿಯಲ್ಲಿರುವ ಉಸ್ತಾದ್‌ರಿಗೆ ಸ್ಕೂಟರ್‌ನಲ್ಲಿ ಊಟ ಕೊಂಡೊಯ್ಯುತ್ತಿದ್ದಾಗ ಮನೆಯ ಅಲ್ಪ ದೂರದ ಪೈವಳಿಕೆ-ಚೇವಾರು ರಸ್ತೆ ಜಂಕ್ಷನ್‌ಗೆ ತಲುಪುತ್ತಿದ್ದಂತೆ ಎದುರಿನಿಂದ ಆಗಮಿಸಿದ ಜೀಪ್‌ಗೆ ಸ್ಕೂಟರ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಸವಾರ ವಿದ್ಯಾರ್ಥಿ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ಕೂಡಲೇ ದೇರಳಕಟ್ಟೆ ಆಸ್ಪತೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾನೆ.
ಮೃತನು ತಂದೆ, ತಾಯಿ ಫಾತಿಮ, ಸಹೋದರ-ಸಹೋದರಿಯರಾದ ಇಫಾತ್, ಇಫ್ಲಾಹ್, ಇಪ್ತಹ್, ಅಬೂಬಕ್ಕರ್, ಇಮ್ನ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾನೆ. ಅಪಘಾತಕ್ಕೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಜೀಪು ಚಾಲಕನ ವಿರುದ್ಧ ಕೇಸು ದಾಖಲಿಸಿದ್ದಾರೆ. ದೇರಳಕಟ್ಟೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು