ಜೂಜಾಟ: 51,600 ರೂ. ವಶ; ನಾಲ್ವರ ಸೆರೆ
ಕಾಸರಗೋಡು: ಪನಯಾಲ್ ಕೀಕಾನ ಅರಯಾಲಿಂಗಾಲ್‌ನ ಅಡಿಕೆ ತೋಟದಲ್ಲಿ ಕಾರ್ಯ ವೆಸಗುತ್ತಿದ್ದ ಜೂಜಾಟ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಆ ವೇಳೆ ಅಲ್ಲಿದ್ದ 20 ಮಂದಿ ತಪ್ಪಿಸಿಕೊಂಡಿದ್ದಾರೆ. ಜೂಜಾಟ ಕೇಂದ್ರದಿಂದ 51,600ರೂ. ನಗದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ವೆಳುತ್ತೋಳಿಯ ವಿ. ಸುಧೀಶ (38), ಪಾಡಿಯ ಬಿ.ಎ. ಜಾಫರ್ (33), ಚೆರ್ಕ
ಪ್ಪಾರದ ಎ. ವಿಬೀಶ್ (33) ಮತ್ತು ಞಾಣಿಕ್ಕಾಲಿನ ಬಿ. ರಾಜನ್ (40) ಬಂಧಿತರಾದ ಆರೋಪಿಗಳು.