ಟೈಲರ್ ಅಸೌಖ್ಯದಿಂದ ನಿಧನ

ಉಪ್ಪಳ: ಮುಳಿಂಜ ಬಳಿಯ ಕೋರಿಕ್ಕಾರು  ಚುಳ್ಳಿ ನಿವಾಸಿ ರಮೇಶ.ಕೆ    (೬೩) ನಿಧನ ಹೊಂದಿದರು. ಇವರು ಪಚ್ಲಂಪಾರೆಯಲ್ಲಿ ಟೈಲರಿಂಗ್ ಅಂಗಡಿ ನಡೆಸುತ್ತಿದ್ದರು. ಕಳೆದ ಕೆಲವು ತಿಂಗಳಿಂದ ಅಸೌಖ್ಯ ಬಾಧಿಸಿದ್ದು, ಇದರಿಂದ ಚಿಕಿತ್ಸೆಯಲ್ಲಿದ್ದರು.  ಇಂದು ಬೆಳಿಗ್ಗೆ  ಮನೆಯಲ್ಲಿ ನಿಧನ ಸಂಭವಿಸಿದೆ.

ದಿವಂಗತರಾದ ಐತ್ತಪ್ಪ-ಪರಮೇಶ್ವರಿ ದಂಪತಿಯ ಪುತ್ರನಾದ ಮೃತರು ಪತ್ನಿ ಬೇಬಿ, ಪುತ್ರ ಮಿಥುನ್ ರಾಜ್, ಸಹೋದರ-ಸಹೋದರಿ ಯರಾದ ಕೃಷ್ಣಪ್ಪ, ರಾಮಚಂದ್ರ, ಸುಂದರ, ರಾಧಾ, ಭವಾನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page