ಟ್ರಾವಲ್ಸ್ ನೌಕರ ಪುಟ್ಬಾಲ್ ಆಟದ ಮಧ್ಯೆ ಕುಸಿದು ಬಿದ್ದು ಮೃತ್ಯು

ಕಾಸರಗೋಡು: ಟರ್ಫ್‌ನಲ್ಲಿ ಫುಟ್ಭಾಲ್ ಆಟವಾಡುತ್ತಿದ್ದಾಗ ಟ್ರಾವೆಲ್ ಏಜೆನ್ಸಿಯ ನೌಕರ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಅಣಂಗೂರು ಬೆದಿರದ ಎನ್.ಎ. ಮುಹಮ್ಮದ್ ಹಾಜಿ-ದಿ|  ಸುಹರಾಬಿ ದಂಪತಿಯ ಪುತ್ರನಾದ ಎನ್.ಎಂ.  ಹಾರಿಸ್ (೪೬) ಮೃತ ಪಟ್ಟ ವ್ಯಕ್ತಿ. ನಿನ್ನೆರಾತ್ರಿ ಉಳಿಯತ್ತ ಡ್ಕದಲ್ಲಿ ಘಟನೆ ನಡೆದಿದೆ. ಆಟದ ಮಧ್ಯೆ ವಿಶ್ರಾಂತಿ ಸಮಯದಲ್ಲಿ ಇವರು ಕುಸಿದು   ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಈ ಹಿಂದೆ ಮೌಲವಿ ಟ್ರಾವೆಲ್ಸ್‌ನಲ್ಲಿ ನೌಕರನಾಗಿದ್ದರು. ಬಳಿಕ ಗಲ್ಫ್‌ಗೆ ತೆರಳಿದ್ದರು. ಊರಿಗೆ ಮರಳಿ ಬಂದ ಬಳಿಕ ಅಕ್ಬರ್ ಟ್ರಾವೆಲ್ಸ್‌ನಲ್ಲಿ  ಕೆಲಸ ನಿರ್ವಹಿಸುತ್ತಿದ್ದರು.

 ಮೃತರು ಪತ್ನಿ ಹಸೀನಾ, ಮಕ್ಕಳಾದ ಹಂನ, ಹನ, ಹೈಸ್, ಸಹೋದರ-ಸಹೋದರಿಯರಾದ ಎನ್.ಎಂ. ಹಸೈನಾರ್, ಎನ್.ಎಂ. ಸಿದ್ದಿಕ್, ಎನ್.ಎಂ. ಫೈಸಲ್, ಎನ್.ಎಂ. ಇಲ್ಯಾಸ್, ಎನ್.ಎಂ. ಶಹೀದ್, ಎನ್.ಎಂ. ಹಾಶಿಫ್, ಎನ್.ಎಂ. ಶೆಫೀದ, ಎನ್.ಎಂ. ಸಾನಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಹಲವಾರು ಮಂದಿ ಸ್ನೇಹಿತರುಳ್ಳ ಹಾರಿಸ್‌ರ ಅಕಾಲಿಕ ನಿಧನ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.  ಮೃತದೇಹದ ಅಂತ್ಯಸಂಸ್ಕಾರ ಇಂದು ಬೆಳಿಗ್ಗೆ ಬೆದಿರ ಜುಮಾ ಮಸೀದಿ ಪರಿಸರದಲ್ಲಿ ನಡೆಯಿತು.

Leave a Reply

Your email address will not be published. Required fields are marked *

You cannot copy content of this page