ಡ್ರೈ-ಡೇ ಕಾರ್ಯಾಚರಣೆ ಮುಂದುವರಿಕೆ: 174 ಪ್ಯಾಕೆಟ್ ಕರ್ನಾಟಕ ಮದ್ಯ ಪತ್ತೆ

ಕಾಸರಗೋಡು: ಲೋಕಸಭಾ ಚುನಾವಣೆಯ ವೇಳೆ ಎರಡು ದಿನ ಮದ್ಯ ಮಾರಾಟದ ಮೇಲೆ ನಿಷೇಧ ಹೇರಲಾಗಿರುವಂತೆಯೇ ಈ ವೇಳೆ   ಅಕ್ರಮವಾಗಿ ಮದ್ಯ ಮಾರಾಟ ಮತ್ತು ಸಾಗಾಟವನ್ನು ಪತ್ತೆಹಚ್ಚುವ ಡ್ರೈ-ಡೇ ಕಾರ್ಯಾಚರಣೆಯಂತೆ ಕಾಸರಗೋಡು ರೇಂಜ್ ಅಬಕಾರಿ ಕಚೇರಿ ಎಕ್ಸೈಸ್ ಇನ್ಸ್‌ಪೆಕ್ಟರ್ (ಜಿ) ಜೋಸೆಫ್ ಜೆ.ಯು ರ ನೇತೃತ್ವದಲ್ಲಿ ಚೆರ್ಕಳದಲ್ಲಿ ನಿನ್ನೆ ನಡೆಸಿದ ದಾಳಿಯಲ್ಲಿ 180 ಎಂ.ಎಲ್‌ನ 174 ಟೆಟ್ರಾ ಪ್ಯಾಕೆಟ್ (31.32 ಲೀಟರ್) ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

ಈ ಮಾಲನ್ನು ಮಾರಾಟಕ್ಕಾಗಿ ಚೆರ್ಕಳದ ಬಳಿ ಯಾರೋ ಬಚ್ಚಿಟ್ಟಿದ್ದರು. ಆದರೆ ಅದನ್ನು ಅಲ್ಲಿ ಬಚ್ಚಿಟ್ಟಿರುವವರ ಮಾಹಿತಿ  ಲಭಿಸಿಲ್ಲವೆಂದೂ,  ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳನ್ನು ಪತ್ತೆಹಚ್ಚುವ ಕ್ರಮವೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ ರಂಜಿತ್ ಕೆ.ವಿ, ಸಿಇಒಗಳಾ ದ ಕಣ್ಣನ್ ಕುಂಞಿ ಮತ್ತು ಶ್ಯಾಮ್ ಜಿತ್ ಎಂಬವರು ಒಳಗೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page