ತೃಶೂರು: ರೈಲು ಹಳಿ ಮೇಲೆ ಸರಳು ಇರಿಸಿ ಬುಡಮೇಲು ಕೃತ್ಯ ಯತ್ನ
ತೃಶೂರು: ರೈಲು ಹಳಿ ಮೇಲೆ ಕಬ್ಬಿಣದ ಸರಳು ಇರಿಸಿ ಬುಡ ಮೇಲು ಕೃತ್ಯಕ್ಕೆ ಯತ್ನಿಸಿದ ಘಟನೆ ತೃಶೂರಿನಲ್ಲಿ ನಡೆದಿದೆ. ಇಂದು ಮುಂಜಾನೆ 4.55ರ ವೇಳೆ ಸರಕು ರೈಲು ಈ ಹಳಿ ಮೇಲೆ ಸಂಚರಿಸಿ ದಾಗಲೇ ಘಟನೆ ಅರಿವಿಗೆ ಬಂದಿದೆ.ತೃಶೂರು-ಎರ್ನಾಕುಳಂ ಡೌನ್ ಲೈನ್ ಹಳಿಯಲ್ಲಿ ಸರಳು ಇರಿಸಲಾಗಿತ್ತು. ಸರಳನ್ನು ರೈಲು ದೂಡಿಕೊಂಡು ಮುಂದೆ ಸಾಗಿದ್ದು, ಬಳಿಕ ಸರಳು ಹಳಿಯಿಂದ ಹೊರಕ್ಕೆಸೆಯಲ್ಪಟ್ಟಿತ್ತು. ಇದರಿಂದ ಭಾರೀ ಅಪಾಯ ತಪ್ಪಿದೆ. ಈ ಬಗ್ಗೆ ಲೋಕೋ ಪೈಲಟ್ ನೀಡಿದ ಮಾಹಿತಿಯಂತೆ ಅಧಿಕಾರಿಗಳು ತಲುಪಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳ ಘಟನೆಗೆ ಸಂಬಂಧಿಸಿ ತಮಿಳುನಾಡು ನಿವಾಸಿ ಹರಿ (38) ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ. ರೈಲು ಹಳಿಯಿಂದ ಕಬ್ಬಿಣ ಕಳವು ನಡೆಸಲು ಈತ ಯತ್ನಿಸಿರುವುದಾಗಿ ಅಂದಾಜಿಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದರೆ.