ತೆಂಗಿನಕಾಯಿ ಸುಲಿಯುವ ಉಪಕರಣದಿಂದ ತಲೆಗೆ ಹೊಡೆದು ತಂದೆಯ ಕೊಲೆ: ಮಗ ಪೊಲೀಸ್ ಕಸ್ಟಡಿಗೆ
ಕಾಸರಗೋಡು: ತೆಂಗಿನ ಕಾಯಿ ಸುಲಿಯುವ ಉಪಕರಣ ದಿಂದ ಮಗ ತಂದೆಯ ತಲೆಗೆ ಹೊಡೆದು ಕೊಲೆಗೈದ ಘಟನೆ ನಡೆದಿದೆ. ಪಳ್ಳಿಕ್ಕೆರೆ ಸೈಂಟ್ ಮೇರೀಸ್ ಶಾಲೆ ಸಮೀಪದ ಕೋಟಮತ್ತ್ ವೀಟಿಲನ ಪಿ. ಅಪ್ಪಕುಂಞಿ (೬೫) ಕೊಲೆಗೀ ಡಾದ ವ್ಯಕ್ತಿ. ಇದಕ್ಕೆ ಸಂಬಂಧಿಸಿ ಪುತ್ರ ಪಿ.ಟಿ. ಪ್ರಮೋದ್ (೩೭)ನನ್ನು ಬೇಕಲ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ನಿನ್ನೆ ಸಂಜೆ ಈ ಕೊಲೆ ನಡೆದಿದೆ. ಆ ವೇಳೆ ಅಪ್ಪಕುಂಞಿಯವರ ಪತ್ನಿ ಕೂಡಾ ಮನೆಯಲ್ಲಿದ್ದರು. ನಿನ್ನೆ ಸಂಜೆ ಮನೆಗೆ ಬಂದ ಪ್ರಮೋದ್ ಬಾಗಿಲು ಒಡೆದು ಒಳನುಗ್ಗಿ ತೆಂಗಿನಕಾಯಿ ಸುಲಿಯುವ ಉಪಕರಣದಿಂದ ಅಪ್ಪಕುಂಞಿಯವರ ತಲೆಗೆ ಹೊಡೆದ ನೆಂದೂ, ಆ ವೇಳೆ ಉಂಟಾದ ಬೊಬ್ಬೆ ಕೇಳಿದ ನೆರೆಮನೆಯವರು ಮತ್ತು ಅಲ್ಲೇ ಪಕ್ಕದಲ್ಲಿರುವ ಸಂಬಂಧಿಕರು ತಕ್ಷಣ ಅಲ್ಲಿಗೆ ಓಡಿ ಬಂದಾಗ ಅಪ್ಪಕುಂಞಿ ಗಂಭೀರ ಗಾಯಗೊಂ ಡು ರಕ್ತದ ಮಡುವಿನಲ್ಲಿ ಬಿದ್ದಿದ್ದರೆನ್ನ ಲಾಗಿದೆ. ಅವರನ್ನು ತಕ್ಷಣ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ರಾತ್ರಿ ವೇಳೆ ಅವರು ಕೊನೆಯುಸಿರೆಳೆ ದರೆಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ರವಿವಾರ ಮಧ್ಯಾಹ್ನವೂ ಪುತ್ರ ಪ್ರಮೋದ್ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಅಪ್ಪ ಕುಂಞಿ ಬೇಕಲ ಪೊಲೀಸರಿಗೆ ದೂರು ನೀಡಿದ್ದರು. ಮಾರಕಾಯು ಧಗಳಿಂದ ತನ್ನ ಮೇಲೆ ಹಲ್ಲೆ ನಡೆಸಲಾಗಿತ್ತೆಂದು ಆ ದೂರಿನಲ್ಲಿ ತಿಳಿಸಲಾಗಿತ್ತು. ಅದರಂತೆ ಬೇಕಲ ಪೊಲೀಸರು ಪ್ರಮೋದ್‌ನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ತನ್ನ ವಿರುದ್ಧ ಕೇಸು ನೀಡಿದ ದ್ವೇಷವೇ ಪ್ರಮೋದ್ ತಂದೆ ಅಪ್ಪಕುಂಞಿಯನ್ನು ಕೊಲೆಗೈಯ್ಯಲು ಕಾರಣವೆಂದು ಪೊಲೀಸರು ಹೇಳುತ್ತಿದ್ದಾರೆ.
ಗಲ್ಫ್ ಉದ್ಯೋಗಿಯಾಗಿರುವ ಪ್ರಮೋದ್ ಮದ್ಯಪಾನಿಯೂ ಆಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಇಂದು ಮರಣೋತ್ತರ ಪರೀಕ್ಷೆಗೊಳಪಡಿಸ ಲಾಗುವುದು. ಬಳಿಕ ಆರೋಪಿಯ ಬಂಧನ ದಾಖಲಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.