ನಕಲಿ ಚಿನ್ನ ಅಡವಿರಿಸಲು ಯತ್ನಿಸಿದ ದೂರು ಪ್ರಕಾರ ಪ್ರಕರಣ ದಾಖಲು

ಕಾಸರಗೋಡು: ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಅಡವಿರಿಸಲು ಯತ್ನಿಸಿದ ದೂರಿನಂತೆ ಓರ್ವರ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೊಸದುರ್ಗದ ಬಾಲಕೃಷ್ಣ ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಕಾಸರಗೋಡು ಶಾಖೆಯಲ್ಲಿ ಜೂನ್ 20ರಂದು ನಕಲಿ ಚಿನ್ನ ಅಡವಿರಿಸಲು ತಂದ ಬಗ್ಗೆ ಬ್ಯಾಂಕ್‌ನ ಮೆನೇಜರ್ ನೀಡಿದ ದೂರಿನನ್ವಯ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page