ನಕಲಿ ಮತದಾನ ಆರೋಪ: ಸಿಪಿಎಂ ಏಜೆಂಟ್ ಸೇರಿದಂತೆ ಆರು ಮಂದಿ ವಿರುದ್ಧ ಎಫ್‌ಐಆರ್

ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರಕ್ಕೊಳಪಟ್ಟ ಕಲ್ಯಾಶ್ಶೇರಿ ವಿಧಾನಸಭಾ ಕ್ಷೇತ್ರದ ಕಲ್ಯಾಶ್ಶೇರಿಯ 164ನೇ ಮತಗಟ್ಟೆಗೆ ಸೇರಿದ ಎಡಕ್ಕಾಡ್ ಹೌಸ್‌ನ ದೇವಿ (92) ಎಂಬವರಿಗೆ ಅವರ ಮನೆ ಯಲ್ಲೇ ಮತ ಚಲಾಯಿಸುವಂತೆ ಮಾಡಲು ಚುನಾವಣಾ ಸಿಬ್ಬಂದಿಗಳು ಅವರ ಮನೆಗೆ ಮೊನ್ನೆ ನೇರವಾಗಿ ಬಂದಾಗ, ದೇವಿಯವರ ಪರ ಬೂತ್ ಏಜೆಂಟ್ ಮತ ಚಲಾಯಿಸಿದ್ದಾರೆಂದು ಆರೋಪಿಸಿ ನೀಡಲಾದ ದೂರಿನಂತೆ ಕಣ್ಣಾಪುರಂ ಪೊಲೀಸರು ಆರು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿ ಕೊಂಡಿದ್ದಾರೆ.

ಕಲ್ಯಾಶ್ಶೇರಿ ಉಪ ಚುನಾವಣಾಧಿ ಕಾರಿಯವರು ಕಣ್ಣೂರು ಸಿಟಿ ಪೊಲೀಸ್ ಕಮೀಷನರ್‌ರ ಮೂಲಕ ನೀಡಿದ ದೂರಿನಂತೆ  ಪೊಲೀಸರು ಈ ಪ್ರಕರಣ ದಾಖಳಿಸಿಕೊಂಡಿದ್ದಾರೆ. ಜನಪ್ರತಿನಿಧಿ ಕಾನೂನಿನ ಸೆಕ್ಷನ್ 128 (1), ಐಪಿಸಿ ಸೆಕ್ಷನ್ 171 (ಸಿ) ಮತ್ತು 171 (ಎಫ್) ಪ್ರಕಾರ   ಬೂತ್ ಏಜೆಂಟ್ ಸಿಪಿಎಂನ ಇ.ಕೆ. ಗಣೇಶನ್‌ನನ್ನು ಪ್ರಧಾನ ಆರೋಪಿಯನ್ನಾಗಿಸಿ ಹಾಗೂ ಐವರು ಚುನಾವಣಾ ಸಿಬ್ಬಂದಿಗಳು ಸೇರಿದಂತೆ ಒಟ್ಟು ಆರು ಮಂದಿಯ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ.

ನಕಲಿ ಮತದಾನದ ಬಗ್ಗೆ ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿಯವರ ಚೀಫ್ ಇಲೆಕ್ಟ್ರಿಕಲ್ ಏಜೆಂಟ್ ಕೆ. ಮನೋಜ್ ಅವರು ಈ ಬಗ್ಗೆ ಸಿಸಿಟಿವಿ ದೃಶ್ಯಗಳ ಜೊತೆ ದೂರು ನೀಡಿದ್ದರು. ಅದರ ಬೆನ್ನಲ್ಲೇ ಆ ಬಗ್ಗೆ ತನಿಖೆ ನಡೆಸಿ ಅಗತ್ಯದ ಕ್ರಮ ಕೈಗೊಳ್ಳು ವಂತೆ ಮುಖ್ಯ ಚುನಾವಣಾಧಿಕಾರಿ ಯಾದ ಸಂಜಯ್ ಎಂ. ಕೌಲ್ ಅವರು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಕಣ್ಣೂರು ಜಿಲ್ಲಾಧಿಕಾರಿಗೆ ನಿರ್ದೇಶ ನೀಡಿದ್ದರು. ಅದರಂತೆ ನಾಲ್ವರು ಚುನಾವಣಾ ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗದೆ.

ಮಾತ್ರವಲ್ಲ ಚುನಾವಣೆಯ ವೇಳೆ ಮಧ್ಯಸ್ಥಿಕೆ ವಹಿಸಿ ನಡೆಸಿದ ಮತದಾನವನ್ನು ರದ್ದುಪಡಿಸಿ ಮರು ಮತದಾನ ನಡೆಸುವ ತೀರ್ಮಾನವನ್ನೂ ಚುನಾವಣಾ ಆಯೋಗ ಕೈಗೊಂಡಿದೆ.

Leave a Reply

Your email address will not be published. Required fields are marked *

You cannot copy content of this page