ನಕಲಿ ವಿಮಾನ ಟಿಕೆಟ್ ನೀಡಿ ವೈದ್ಯಕೀಯ ವಿದ್ಯಾರ್ಥಿಗಳ ೨೩ ಲಕ್ಷ ರೂಪಾಯಿ ವಂಚನೆ
ಮಂಜೇಶ್ವರ: ನಕಲಿ ವಿಮಾನ ಟಿಕೆಟ್ ನೀಡಿ ೨೩ ಲಕ್ಷ ರೂಪಾಯಿ ವಂಚಿಸಲಾಯಿತೆಂದು ಆರೋಪಿಸಿ ವೈದ್ಯಕೀಯ ವಿದ್ಯಾರ್ಥಿ ನೀಡಿದ ದೂರಿ ನಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಬಿಜೋಯ್ರ ನಿರ್ದೇಶ ಪ್ರಕಾರ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆgಂಭಿಸಿದ್ದಾರೆ.
ಯುರೋಪ್ನ ಮಾಲ್ಡೋವಾದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಯಾದ ತಿರುವನಂತಪುರ ವಿವನ್ ನಗರ ನಿವಾಸಿ ಅಮಾನ್ ಅಪ್ಸಲ್ ಅಹಮ್ಮದ್ರ ದೂರಿನ ಪ್ರಕಾರ ಉಪ್ಪಳ ಕೋಡಿಬೈಲು ಕುರ್ಚಿಪಳ್ಳ ಜಾಸ್ಮಿನ್ ಮಂಜಿಲ್ನ ಅಬ್ದುಲ್ ಹಾಶಿಂ ವಿರುದ್ಧ ಕೇಸು ದಾಖಲಿಸಲಾಗಿದೆ. ದೂರುಗಾರನ ಸಹಿತ ೩೦ ಮಂದಿ ಕೇರಳೀಯ ವಿದ್ಯಾರ್ಥಿಗಳು ಮಾಲ್ಡೋವಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ೨೦೨೩ರಲ್ಲಿ ಇವರಿಗೆ ರಜೆ ಲಭಿಸಿದ ಹಿನ್ನೆಲೆಯಲ್ಲಿ ಊರಿಗೆಮರಳಲು ತೀರ್ಮಾನಿಸಿದ್ದರು. ಅಬ್ದುಲ್ ಹಾಶಿಂ ಮುಖಾಂತರ ಆನ್ಲೈನ್ ನಲ್ಲಿ ಟಿಕೆಟ್ ಕಾದಿರಿಸಲಾಗಿತ್ತು. ಬ್ಯಾಂಕ್ಖಾತೆ ಮೂಲಕ ೨೩ ಲಕ್ಷ ರೂಪಾಯಿ ಪಡೆದುಕೊಂಡ ಅಬ್ದುಲ್ ಹಾಶಿಂ ಟಿಕೆಟ್ಗಳನ್ನು ನೀಡಿದ್ದನು. ಅನಂತರ ಟ್ರಾವೆಲ್ ಸೈಟ್ನಲ್ಲಿ ಪರಿಶೀಲಿಸಿದಾಗ ವಿಮಾನ ಟಿಕೆಟ್ಗಳು ನಕಲಿಯಾಗಿ ವೆಯೆಂದು ತಿಳಿದುಬಂದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಹಣ ನಷ್ಟಗೊಳ್ಳುವುದರೊಂದಿಗೆ ದೂರುಗಾರ ಅಬ್ದುಲ್ ಹಾಶಿಂನನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿ ದರೂ ಪ್ರತಿಕ್ರಿಯೆ ಉಂಟಾಗಿಲ್ಲ. ಇದರಿಂದ ತಾವು ವಂಚನೆಗೀಡಾದ ವಿಷಯ ವಿದ್ಯಾರ್ಥಿಗಳಿಗೆ ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಅಬ್ದುಲ್ ಹಾಶಿಂ ವಿರುದ್ಧ ದೂರು ನೀಡಲಾಗಿದೆ. ಹಣ ಮರಳಿ ನೀಡುವಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿದ ದೂರಿನಲ್ಲಿ ಆಗ್ರಹಪಡಲಾಗಿದೆ.