ನವಕೇರಳ ಸಭೆ: ಲಭಿಸಿದ ದೂರುಗಳಲ್ಲಿ ಎರಡು ದಿನದೊಳಗೆ ತೀರ್ಪು ನೀಡಲು ಜಿಲ್ಲಾಧಿಕಾರಿ ಸೂಚನೆ

ಕಾಸರಗೋಡು:  ನವಕೇರಳ ಸಭೆಯಲ್ಲಿ ಲಭಿಸಿದ ಎಲ್ಲಾ ದೂರುಗಳನ್ನು ಈ ತಿಂಗಳ ೨೨ರ ಮುಂಚಿತ ತೀರ್ಪು ಕಲ್ಪಿಸಬೇಕೆಂದು ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಸೂಚಿಸಿದ್ದಾರೆ. ಅರ್ಜಿಗಳ ಬಗ್ಗೆ ಪರಾಮರ್ಶೆ ನಡೆಸಲು ವಿವಿಧ ಇಲಾಖೆಗಳ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ಇಲಾಖೆ ಗಳಿಗೆ ಲಭಿಸಿದ ಜಿಲ್ಲೆಯಲ್ಲಿ ಜ್ಯಾರಿ ಗೊಳಿಸಲು ಸಾಧ್ಯವಿರುವ ಯೋಜನೆಗಳಿಗೆ ಸಂಬಂಧಿಸಿ ಅರ್ಜಿಗಳನ್ನು ಅವುಗಳ ಸಾಧ್ಯತೆ ಅಧ್ಯಯನವನ್ನು ಆಯಾ ಇಲಾಖೆಗಳು ನಡೆಸಿದ ಬಳಿಕ ಜಿಲ್ಲಾ ಮಟ್ಟದಲ್ಲಿ ಕ್ರೋಡೀಕರಿಸಿ ಜಿಲ್ಲಾಧಿಕಾರಿಗೆ ನೀಡಬೇಕು.

ಅರ್ಜಿಗಳಲ್ಲಿ ತೀರ್ಪು ಕಲ್ಪಿಸುವಾಗ ಅರ್ಜಿದಾರನಿಗೆ ಗುಣಕರವಾದ ರೀತಿಯಲ್ಲಿ ಉತ್ತರ ನೀಡಬೇಕೆಂದು ಇಲಾಖೆಗೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅರ್ಜಿಗಳಲ್ಲಿ ಉಂಟಾದ ಪ್ರಗತಿ ಬಗ್ಗೆ ಚರ್ಚೆ ನಡೆಸಲು ಈ ತಿಂಗಳ ೨೩ರಂದು ಮತ್ತೆ ಸಭೆ ನಡೆಯಲಿದೆ ಎಂದು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಲಭಿಸಿದ ಒಟ್ಟು ಅರ್ಜಿಗಳಲ್ಲಿ ೧೩೭೦ ಅರ್ಜಿಗಳಿಗೆ ತೀರ್ಪು ನೀಡಲಾಗಿದೆ. ೫೫೪೧ ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ. ೭೨೮೧ ಅರ್ಜಿಗಳು ವಿವಿಧ ಇಲಾಖೆಗಳ ಪರಿಗಣನೆಯಲ್ಲಿದೆ. ಅಸ್ಪಷ್ಟವಾದ ೧೪ ದೂರುಗಳನ್ನು ಹಿಡಿದಿಡಲಾಗಿದೆ. ಮಂಜೇಶ್ವರ ಮಂಡಲದಲ್ಲಿ ಲಭಿಸಿದ ೨೦೦೫ ಅರ್ಜಿಗಳಲ್ಲಿ ೨೪೯ಕ್ಕೆ ತೀರ್ಪು ನೀಡಲಾಗಿದೆ. ಕಾಸರಗೋಡು ಮಂಡಲದಲ್ಲಿ ೩೪೭೬ ದೂರುಗಳು ಲಭಿಸಿದ್ದು, ೩೦೦ಕ್ಕೆ ತೀರ್ಪು ನೀಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page