ನಾಗರಹಾವಿಗೂ ಎದೆಗುಂದದ ಬೆಕ್ಕು

ಮುಳಿಯಾರು: ನಾಗರ ಹಾವು ಬಂದರೂ ಅಂಗಳಕ್ಕೆ ಪ್ರವೇಶಿಸಲು ಬಿಡದ ಬೆಕ್ಕಿನ ಕಾರ್ಯ ಮನೆಮಂದಿಗೆ ಆಶ್ಚರ್ಯ ತಂದಿದೆ. ಕುಣಿಯೇರಿ ನಿವಾಸಿ ಇ. ಅಬ್ದುಲ್ ರಹಿಮಾನ್ ಎಂಬವರ ಮನೆ ಬಳಿ ಇತ್ತೀಚೆಗೆ ಒಂದೂವರೆ ಮೀಟರ್ ಉದ್ದದ ನಾಗರಹಾವು ತಲುಪಿತ್ತು. ಅಂಗಳಕ್ಕೆ ಹತ್ತಲು ಆರಂಭಿಸಿದ ಹಾವಿನ ಮುಂದುಗಡೆ ಬೆಕ್ಕು ಗಟ್ಟಿಯಾಗಿ ಕುಳಿತುಕೊಂಡಿತು. ಹಲವು ಬಾರಿ ಪ್ರಯತ್ನಿಸಿದರೂ ಬೆಕ್ಕು ಅಲ್ಲಿಂದ ಕದಲದೇ ಇದ್ದಾಗ ಅಂಗಳಕ್ಕೆ ಪ್ರವೇಶಿಸಲಿರುವ ಯತ್ನವನ್ನು ಉಪೇಕ್ಷಿಸಿ ಹಾವು ಅಲ್ಲಿಂದ ಪರಾರಿಯಾಗಿದೆ.

You cannot copy contents of this page