ನಾಪತ್ತೆಯಾದ 12ರ ಬಾಲಕಿಗೆ ದೌರ್ಜನ್ಯ: ಅಪ್ರಾಪ್ತ ಪ್ರಿಯತಮ, ಕರ್ನಾಟಕ ನಿವಾಸಿ ಯುವಕನ ವಿರುದ್ಧ ಕೇಸು
ಕಾಸರಗೋಡು: ಕೆಲವು ದಿನದ ಹಿಂದೆ ನಾಪತ್ತೆಯಾಗಿದ್ದ 17ರ ಹರೆಯದ ಅಪ್ರಾಪ್ತೆಯನ್ನು ಪ್ರಿಯತಮನ ಜೊತೆ ಪತ್ತೆಹಚ್ಚಲಾಗಿದೆ. ಈಕೆ ನೀಡಿದ ಹೇಳಿಕೆಯಂತೆ ಪ್ರಿಯತಮ 17ರ ಹರೆಯದ ಅಪ್ರಾಪ್ತ, ಕರ್ನಾಟಕ ನಿವಾಸಿಯಾದ ಇನ್ನೋರ್ವ ಯುವಕನ ವಿರುದ್ಧ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಕಾಸರಗೋಡು ಮಹಿಳಾ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಬಾಲಕಿಯನ್ನು ದೌರ್ಜನ್ಯಗೈಯ್ಯಲಾಗಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದ ಮಧ್ಯೆ ಬಾಲಕಿ ಹಾಗೂ ಪ್ರಿಯತಮನನ್ನು ಜೊತೆಯಾಗಿ ಪತ್ತೆಹಚ್ಚಲಾಗಿದೆ. ಇವರಿಬ್ಬರನ್ನು ಕಸ್ಟಡಿಗೆ ತೆಗೆದು ಠಾಣೆಗೆ ಕರೆತಂದು ಸಮಗ್ರ ಹೇಳಿಕೆ ದಾಖಲಿಸಲಾಗಿದೆ. ಆ ಬಳಿಕ ಪೋಕ್ಸೋ ಕೇಸು ದಾಖಲಿಸಿ ಬಂಧಿಸಲಾಗಿದೆ. ಕರ್ನಾಟಕ ನಿವಾಸಿಯಾದ ಯುವಕನೋರ್ವ ತನ್ನನ್ನು ದೌರ್ಜನ್ಯಗೈದಿರುವುದಾಗಿ ಈಕೆ ಹೇಳಿಕೆ ನೀಡಿದ್ದು, ಆತನ ವಿರುದ್ಧ ಕೇಸು ದಾಖಲಿಸಲಾಗಿದ್ದರೂ ಆರೋಪಿಯ ಬಗ್ಗೆ ತಿಳಿದು ಬಂದಿಲ್ಲ.