ನೀರಲ್ಲಿ ಮುಳುಗಿ ಯುವಕ ದಾರುಣ ಮೃತ್ಯು

ಮಂಜೇಶ್ವರ: ಕೊಳದಲ್ಲಿ ಸ್ನಾನ ಮಾಡಲೆಂದು ನೀರಿಗಿಳಿದ ಯುವಕ ನೋರ್ವ ಕೆಸರಿನಲ್ಲಿ ಹೂತುಹೋಗಿ ಮೃತಪಟ್ಟ ಘಟನೆ ನಡೆದಿದೆ. ಹೊಸಂಗಡಿ ಬಳಿಯ ದುರ್ಗಿಪಳ್ಳ ನಿವಾಸಿ ದಿ| ಸುಬ್ರಾಯ ಆಚಾರ್ಯರ ಪುತ್ರ ಹರಿಪ್ರಸಾದ್ ಆಚಾರ್ಯ [36] ಮೃತಪಟ್ಟ ದುರ್ದೆÊವಿ.
ವೆಲ್ಡಿಂಗ್ ಕಾರ್ಮಿಕರಾದ ಇವರು ಸೋಮವಾರ ಸಂಜೆ ರಾಷ್ಟಿçÃಯ ಹೆದ್ದಾರಿ ಕೆಳಗಿನ ತಲಪಾಡಿಯ ಖಾಸಗಿ ವ್ಯಕ್ತಿಯ ಜಾಗದಲ್ಲಿರುವ ಕೊಳದಲ್ಲಿ ಸ್ನಾನ ಮಾಡಲೆಂದು ನೀರಿಗಿಳಿದಾಗ ಕೆಸರಿನಲ್ಲಿ ಹೂತು ಹೋಗಿ ಮೃತಪಟ್ಟಿದ್ದಾರೆ. ಮಂ ಗಳೂರಿನಿಂದ ಅಗ್ನಿಶಾಮಕ ದಳದ ವರು ತಲುಪಿ ಮೃತದೇಹವನ್ನು ಮೇಲೆತ್ತಿದ್ದಾರೆ. ಈ ಸಂಬAಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಿನ್ನೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಸಂಬAಧಿಕರಿಗೆ ಬಿಟ್ಟುಕೊಡ ಲಾಗಿದೆ. ಮೃತರು ತಾಯಿ ಉಮಾವತಿ, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page