ನುಳ್ಳಿಪ್ಪಾಡಿಯಿಂದ ಹೊಸ ಬಸ್ ನಿಲ್ದಾಣ ತನಕ ರಾಷ್ಟ್ರೀಯ ಹೆದ್ದಾರಿ ನಾಳೆ ಪೂರ್ಣ ಮುಚ್ಚುಗಡೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆ ಯಂತೆ ಕರಂದಕ್ಕಾಡಿನಿAದ ಆರಂಭಗೊAಡು ನುಳ್ಳಿಪ್ಪಾಡಿ ತನಕ ನಿರ್ಮಿಸಲಾಗುವ ಫ್ಲೈ ಓವರ್‌ನ  ಪೈಕಿ ಹೊಸ ಬಸ್ ನಿಲ್ದಾಣ ಬಳಿ ಎ-2-ಪಿ28 ಸ್ಪ್ಯಾನ್‌ನ ನಿರ್ಮಾಣ ಕೆಲಸ ನಡೆಯಲಿರುವ ಹಿನ್ನೆಲೆಯಲ್ಲಿ ನಾಳೆ ರಾತ್ರಿ  9 ಗಂಟೆ ಯಿಂದ 18ರಂದು ಬೆಳಿಗ್ಗೆ 7.30ರ ತನಕ ನುಳ್ಳಿಪ್ಪಾಡಿ  ಶ್ರೀ ಅಯ್ಯಪ್ಪ ಭಜನಾ ಮಂದಿರದಿAದ ಆರಂಭಗೊAಡು ಹೊಸ ಬಸ್ ನಿಲ್ದಾಣ ತನಕದ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗುವುದೆಂದು  ನಿರ್ಮಾಣ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಮಂ ಗಳೂರು-ಕಾಞಂಗಾಡ್ ರೂಟ್‌ನಲ್ಲಿ  ಸಂಚರಿಸುವ ಬಸ್‌ಗಳು ಕೆಎಸ್‌ಟಿಪಿ ರಸ್ತೆ ಮೂಲಕವೂ, ಕಾಸರಗೋಡು ನಗರ ಮತ್ತು ಚೆಂಗಳ ನಡುವಿನ ವಾಹನಗಳು ಮಧೂರು ರಸ್ತೆ ಮತ್ತು ಚೌಕಿ-ಉಳಿಯತ್ತಡ್ಕ ರಸ್ತೆ ಮೂಲಕ ಸಾಗುವಂತೆಯೂ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page