ನೂರಾರುಮಂದಿಯಿಂದ ಕಡಪ್ಪುರದಲ್ಲಿ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ
ಕಾಸರಗೋಡು: ಶ್ರೀ ವಿಷ್ಣು ಸಹಸ್ರ ನಾಮ ಸ್ತೋತ್ರ ಪಠಣ ಸಮಿತಿ ಉಡುಪಿ, ದಕ್ಷಿಣಕನ್ನಡ ಜಿಲ್ಲೆ, ಕಾಸರಗೋಡು, ಕಣ್ಣೂರು ಜಿಲ್ಲೆ ಸಮಿತಿಯ ಆಶ್ರಯದಲ್ಲಿ ಕಾಸರಗೋಡು ಕಸಬಾ ಕಡಪ್ಪುರದಲ್ಲಿ ಬೃಹತ್ ವಿಷ್ಣು ಸಹಸ್ರನಾಮ ಸ್ತೋತ್ರ ಪಠಣ ಜರಗಿತು. ಕಡಪ್ಪುರ ಶ್ರೀ ಕುರುಂಬಾ ಭಗವತೀ ಕ್ಷೇತ್ರದ ಅಚ್ಚಮ್ಮಾರರು ಸಮುದ್ರಕ್ಕೆ ಹಾಲೆರೆ ಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಸಂಕಲ್ಪ ಪ್ರತಿಜ್ಞೆ ಮಾಡಲಾಯಿತು. ಸಂಜೆ ೪ ಗಂಟೆಯಿಂದ 6 ಗಂಟೆ ವರೆಗೆ ಜರಗಿದ ಸ್ತೋತ್ರ ಪಠಣದಲ್ಲಿ ಮಹಿಳೆಯರ ಸಹಿತ ನೂರಾರು ಮಂದಿ ಭಾಗವಹಿಸಿದರು. ಉಡುಪಿಯ ಶಿರೂರಿನಿಂದ ಕಣ್ಣೂರು ಜಿಲ್ಲೆ ವರೆಗಿನ 150 ಕೇಂದ್ರಗಳಲ್ಲಿ ನಿನ್ನೆ ವಿಷ್ಣುಸಹಸ್ರನಾಮ ಸ್ತೋತ್ರ ಪಠಣ ಜರಗಿದೆ. ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ ಪಾವಂಜೆ, ದ.ಕ. ಅಯೋ ಧ್ಯಾ ರಿಲೀಜಿಯನ್ಸ್ ಟ್ರಸ್ಟ್ ಬೆಂಗಳೂರು, ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ರಿಲೀಜಿಯಸ್ ಟ್ರಸ್ಟ್ ಸಹಕಾರ ದೊಂದಿಗೆ ಕಾರ್ಯಕ್ರಮ ಜರಗಿತು.