ನೇಣುಯತ್ನ ವೇಳೆ ಹಗ್ಗ ತುಂಡಾಗಿ ಬಾವಿಗೆ ಬಿದ್ದು ಮೃತ್ಯು
ಹೊಸದುರ್ಗ; ನೇಣು ಬಿಗಿದು ಆತ್ಮಹತ್ಯೆಗೆತ್ನಿಸುತ್ತಿದ್ದ ಮಧ್ಯೆ ಹಗ್ಗ ತುಂ ಡಾಗಿ ಬಾವಿಗೆ ಬಿದ್ದ ಸೆಕ್ಯುರಿಟಿ ನೌಕರ ನಿಧನಹೊಂದಿದರು. ಕಾಞಂಗಾಡ್ನ ಸಂಸ್ಥೆಯೊಂದರಲ್ಲಿ ಸೆಕ್ಯುರಿಟಿ ಆಗಿದ್ದ ಅಟ್ಟೆಂಗಾನಂ ಕುಂಞಾಕೊಟ್ಟಿಯ ನಿವಾಸಿ ರಾಜನ್ (೫೪) ನಿಧನಹೊಂದಿ ದರು. ನಿನ್ನೆ ಬೆಳಿಗ್ಗೆ ೯.೩೦ರ ಬಳಿಕ ಇವರು ಸ್ನಾನಕ್ಕೆಂದು ತೆರಳಿದ್ದು, ಹೊತ್ತು ಕಳೆ ದರೂ ಹಿಂತಿರುಗದ ಕಾರಣ ಮನೆ ಮಂದಿ ನೋಡಿದಾಗ ಹಗ್ಗ ಕುತ್ತಿಗೆಗೆ ಸಿಲುಕಿಕೊಂಡ ರೀತಿಯಲ್ಲಿ ಬಾವಿಯಲ್ಲಿ ಕಂಡುಬಂದಿದ್ದಾರೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಆ ವೇಳೆಗೆ ಮೃತಪಟ್ಟರು. ಮೃತರು ಪತ್ನಿ ಸುಜಿ, ಮಕ್ಕಳಾದ ಸುರಜ, ಸೂರಜ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.