ಪಡನ್ನಕ್ಕಾಡ್ ಮಹಿಳಾ ಮಂದಿರದಿಂದ ಬಾಲಕಿ ನಾಪತ್ತೆ

ಕಾಸರಗೋಡು: ಪಡನ್ನಕ್ಕಾಡ್‌ನ ಮಹಿಳಾ ಮಂದಿರದಲ್ಲಿದ್ದು ಅಲ್ಲಿಂದಲೇ ಶಾಲೆಗೆ ತೆರಳುತ್ತಿದ್ದ ೧೭ರ ಹರೆಯದ ಬಾಲಕಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಈ ಬಗ್ಗೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಬಾಲಕಿ ಯುವಕನೋರ್ವನ ಜೊತೆ  ವಾಸಿ ಸುತ್ತಿದ್ದಳೆನ್ನಲಾಗಿದೆ. ಈ ವಿಷಯ ತಿಳಿದು ಅಲ್ಲಿನ ಸಿಡಬ್ಲ್ಯುಸಿ ಚೈಲ್ಡ್ ವೆಲ್ಫೇರ್ ಕಮಿಟಿ ಬಾಲಕಿಯನ್ನು ಪಡನ್ನಕ್ಕಾಡ್‌ನ ಮಹಿಳಾ ಮಂದಿರಕ್ಕೆ ಸೇರಿಸಿದ್ದರು. ಬಾಲಕಿಗೆ ಅಲ್ಲಿಂದಲೇ ಶಾಲೆಗೆ ತೆರಳಲು ವ್ಯವಸ್ಥೆ ಏರ್ಪಡಿಸಲಾಗಿತ್ತು. ಇದರಂತೆ ನಿನ್ನೆ ಶಾಲೆಗೆ  ಹೋದ ಬಾಲಕಿ ಮರಳಿ ಬಂದಿಲ್ಲವೆಂದು ದೂರಲಾಗಿದೆ. ಈ ಬಗ್ಗೆ ಮಹಿಳಾ ಮಂದಿರ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page