ಪಾಲಿಟೆಕ್ನಿಕ್ ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಪಾಲಿಟೆಕ್ನಿಕ್ ವಿದ್ಯಾರ್ಥಿ ಕಾಲೇಜು ಹಾಸ್ಟೆಲ್‌ನಲ್ಲಿ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಭೀಮನಡಿ ಮಾಂಙಾಡ್ ವಿಲಂಙನ ಅಭಿಜಿತ್ ಗಂಗಾಧರನ್ (19) ಸಾವನ್ನಪ್ಪಿದ ಯುವಕ. ತೃಕ್ಕರಿಪುರ ಇ.ಕೆ. ನಾಯನಾರ್ ಸ್ಮಾರಕ ಸಹಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಅಭಿಜಿತ್ ನಿನ್ನೆ ಕಾಲೇಜಿನ ಹಾಸ್ಟೆಲ್‌ನ ಕೊಠಡಿಯೊಳಗೆ ಕಿಟಿಕಿ ಸರಳಿಗೆ ನೇಣು ಬಿಗಿದು ಸಾವನ್ನಪ್ಪಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನ. ಇವರು ಇದೇ ಕಾಲೇಜಿನ ಕಂಪ್ಯೂಟರ್ ಇಂಜಿನಿಯರಿಂಗ್ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾನ. ಈತ ವಾಸಿಸುತ್ತಿದ್ದ ಹಾಸ್ಟೆಲ್ ಕೊಠಡಿಯಲ್ಲಿ ಈ ಹಿಂದೆ ಶ್ರೀಕಂಠಾಪುರ ನಿವಾಸಿಯಾದ ವಿದ್ಯಾರ್ಥಿಯೋರ್ವ ವಾಸಿಸುತ್ತಿದ್ದನು. ಆತ ಕೆಲವು ದಿನಗಳ ಹಿಂದೆ ಹಾಸ್ಟೆಲ್ ತೊರೆದಿದ್ದನು. ಅಂದಿನಿಂದ ಅಭಿಜಿತ್ ಮಾತ್ರವೇ ಆ ಹಾಸ್ಟೆಲ್ ಕೊಠಡಿಯಲ್ಲಿ ವಾಸಿಸುತ್ತಿದ್ದನು.
ಚಂದೇರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ತುಂಡಿಯಿಲ್ ಗಂಗಾಧರನ್ ಮತ್ತು ಸಜಿನಿ ದಂಪತಿಯ ಪುತ್ರನಾಗಿರುವ ಅಭಿಜಿತ್ ಸಹೋದರಿ ಅಂಬಿಳಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.