ಮೋದಿ ಮತ್ತೆ ಪ್ರಧಾನಿ ಆಗುತ್ತಾರೆ: ಕೇರಳದಲ್ಲಿಯೂ ತಾವರೆ ಅರಳುತ್ತೆ- ರವೀಶ ತಂತ್ರಿ

ಮಂಜೇಶ್ವರ: ಮೋದಿ ಮತ್ತೆ ಪ್ರಧಾನಿ ಆಗೋದು ಶತ ಸಿದ್ದ, ಈ ಬಾರಿ ಕೇರಳದಲ್ಲಿಯೂ ತಾವರೆ ಅರಳುತ್ತದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಹೇಳಿದರು. ಹೊಸಂಗಡಿ ಪ್ರೇರಣಾದಲ್ಲಿ ಜರಗಿದ ಬಿಜೆಪಿ ಮಂಜೇಶ್ವರ ಮಂಡಲ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆ ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಡ ವಿವರಿಸಿದರು. ಮುಖಂಡರಾದ ಯಾದವ ಬಡಾಜೆ, ವಿಘ್ನೇಶ್ವರ ಮಾಸ್ತರ್ ಕೆದುಕೋಡಿ, ಎ.ಕೆ ಕಯ್ಯಾರ್, ಪದ್ಮನಾಭ ರೈ ಮೀಂಜ, ದಾಮೋದರ ಮೀಯಪದವು, ರಾಜ್ ಕುಮಾರ್ ಅರಿಬೈಲ್, ಚಂದ್ರಾವತಿ ಶೆಟ್ಟಿ, ವಿನಯ ಭಾಸ್ಕರ್, ನಾರಾಯಣ ತುಂಗಾ, ರಕ್ಷನ್ ಅಡೆಕ್ಕಳ, ಜನಪ್ರತಿನಿದಿsಗಳು ಉಪಸ್ಥಿತರಿದ್ದರು, ಯತೀರಾಜ್ ಶೆಟ್ಟಿ ಸ್ವಾಗತಿಸಿ, ಕೆ.ವಿ ಭಟ್ ವಂದಿಸಿದರು. ಈ ಸಂದರ್ಭ ರವೀಶ ತಂತ್ರಿಗಳ ಜನ್ಮದಿನವನ್ನು ಪಕ್ಷದ ವತಿಯಿಂದ ಆಚರಿಸಲಾಯಿತು.

RELATED NEWS

You cannot copy contents of this page