ಪುತ್ತೂರು ನಗರದಲ್ಲಿ ಹಾಡಹಗಲೇ ಯುವತಿಯ ಬರ್ಬರ ಕೊಲೆ: ಬೆಚ್ಚಿ ಬಿದ್ದ ನಾಡು

ಪುತ್ತೂರು: ಪುತ್ತೂರು ನಗರದಲ್ಲಿ ನಿನ್ನೆ ಹಾಡಹಗಲೇ ನಡೆದ ಯುವತಿಯ ಕೊಲೆ  ನಾಡನ್ನು ಬೆಚ್ಚಿ ಬೀಳಿಸಿದೆ.

ಅಳಿಕೆ ಗ್ರಾಮದ ಆದಾಳ ನಿವಾ ಸಿಯೂ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪ ಫ್ಯಾನ್ಸಿ ಅಂಗಡಿಯ ನೌಕರೆಯಾದ ಗೌರಿ (೧೮) ಎಂಬಾಕೆ  ಕೊಲೆಗೀಡಾದ ಯುವತಿ. ಈ ಸಂಬಂಧ ಆರೋಪಿಯಾದ ಬೆಳ್ತಂಗಡಿ ತಾಲೂಕು ವೇಣೂರು ಸಮೀಪದ ನಿವಾಸಿ ಪದ್ಮರಾಜ್ (೨೩) ಎಂಬಾತನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ನಿನ್ನೆ ಮಧ್ಯಾಹ ೧.೫೫ರ ವೇಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದ್ವಾರದ ಸಮೀಪ ರಸ್ತೆಯಲ್ಲಿ ಯುವತಿಯನ್ನು ಕುತ್ತಿಗೆ ಸೀಳಿ ಬರ್ಭರವಾಗಿ ಕೊಲೆಗೈಯ್ಯ ಲಾಗಿದೆ. ಇರಿತದಿಂದ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೌರಿಯನ್ನು ಅಲ್ಲಿ ಸೇರಿದ ಜನರು ಕೂಡಲೇ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ತಲುಪಿಸಿ ಬಳಿಕ ಮಂಗಳೂರಿಗೆ ಕೊಂಡೊಯ್ಯು ತ್ತಿದ್ದ ವೇಳೆ ಆಕೆ ಮೃತಪಟ್ಟಿದ್ದಾಳೆ.

ನಿನ್ನೆ ಮಧ್ಯಾಹ್ನ ಪುತ್ತೂರು ಬಸ್ ನಿಲ್ದಾಣಕ್ಕೆ ಬಂದಿದ್ದ ಆರೋಪಿ ಪದ್ಮರಾಜ್ ಯುವತಿಯನ್ನು ಅಲ್ಲಿಗೆ ಕರೆಸಿದ್ದನು. ಇದರಂತೆ ಅಲ್ಲಿಗೆ ಬಂದ ಆಕೆಯ ಕೈಯಲ್ಲಿ ಎರಡು ಮೊಬೈಲ್ ಪೋನ್‌ಗಳಿದ್ದುದು ಪದ್ಮರಾಜನ ಗಮನಕ್ಕೆ ಬಂದಿತ್ತು. ಅದನ್ನು ಪ್ರಶ್ನಿಸಿದ ಆತ ಒಂದು ಮೊಬೇಲ್‌ನ್ನು ಆಕೆಯ  ಕೈಯಿಂದ ಕಿತ್ತುಕೊಂಡು ಹೋಗಿದ್ದನು. ಇದರ ನಂತರ ಗೌರಿ ಆತನಿಗೆ ಫೋನ್ ಕರೆ ಮಾಡಿ ತನ್ನ ಮೊಬೈಲ್ ನೀಡುವಂತೆ ಕೇಳಿಕೊಂಡಿದ್ದಳು.  ಇದರಿಂದ  ಮಾಣಿ ವರೆಗೆ ತಲುಪಿದ್ದ ಪದ್ಮರಾಜ್ ಮರಳಿ ಪುತ್ತೂರಿಗೆ ಬಂದಿದ್ದು, ಈ ವೇಳೆ ಆತನಿಗಾಗಿ ಗೌರಿ ದೇವಸ್ಥಾನದ ಕೆರೆಯ ಬಳಿ ಕಾಯು ತ್ತಿದ್ದಳು.  ಆಕೆಯನ್ನು ಕೊಲೆಮಾಡುವ ನಿರ್ಧಾರದಿಂದಲೇ ಚಾಕು ತಂದಿದ್ದನು. ಅಲ್ಲಿ ಅವರಿಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ಅಷ್ಟರಲ್ಲಿ ಆಕೆಯ ಕುತ್ತಿಗೆ ಸಹಿತ ದೇಹಾದ್ಯಂತ ಇರಿದು ಗಂಭೀರ ಗಾಯಗೊಳಿಸಿ ಆತ ಪರಾರಿಯಾಗಿದ್ದನು.  ಘಟನೆಯ ಕುರಿತು ಕ್ಷಿಪ್ರ ಕಾರ್ಯಾ ಚರಣೆ ನಡೆಸಿದ ಪೊಲೀಸರು ಆರೋಪಿ ಯನ್ನು ಕೆಲವೇ ಗಂಟೆಗಳೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪದ್ಮರಾಜ್ ಕಳೆದ ನಾಲ್ಕು ವರ್ಷಗಳಿಂದ ತನ್ನನ್ನು ಪ್ರೀತಿ ಸುವಂತೆ ಗೌರಿಯನ್ನು ಒತ್ತಾಯಿಸುತ್ತಿ ದ್ದನೆಂದು ಹೇಳಲಾಗುತ್ತಿದೆ. ಆದರೆ ಆತನ ಬೇಡಿಕೆ ನಿರಾಕರಿಸಿದ ಗೌರಿ ವಿಟ್ಲ ಠಾಣೆ ಯಲ್ಲಿ ದೂರು ನೀಡಿದ್ದಳೆನ್ನ ಲಾಗಿದೆ. ಪ್ರೀತಿಸಲು ಗೌರಿ ನಿರಾಕರಿಸಿ ರುವುದೇ ಆಕೆಯನ್ನು ಪದ್ಮರಾಜ್ ಕೊಲೆಗೈಯ್ಯಲು ಕಾರಣ ವೆಂದು ಅಂದಾಜಿಸಲಾ ಗಿದೆಯೆಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page