ಪುನರ್ ವಿಂಗಡಣೆ: ಲೋಕಸಭಾ ಕ್ಷೇತ್ರಗಳ ಸಂಖ್ಯೆ ೫೪೩ರಿಂದ ೭೫೩ಕ್ಕೇರಿಕೆ ಸಾಧ್ಯತೆ

ನವದೆಹಲಿ: ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ (ಡಿಲಿಮಿಟೇಶನ್) ಪ್ರಕ್ರಿಯೆಗೆ ಕೇಂದ್ರ ಸರಕಾರ ಆರಂಭಿಕ ಚಾಲನೆ ನೀಡಿದೆ.

ಆದರೆ ದಕ್ಷಿಣ ಭಾರತಕ್ಕೆ ಇದು ದೊಡ್ಡ ಆಘಾತ ನೀಡಲಿದೆಯೆಂಬ ದೂರುಗಳೂ ಇದರ ಜತೆಗೆ ಹುಟ್ಟಿ ಕೊಂಡಿದೆ. ಏಕೆಂದರೆ ಜನಸಂಖ್ಯಾ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ಮಾಡಲಾಗುತ್ತಿದೆ. ಹಾಗೆ ನಡೆದರೆ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ ಮತ್ತು  ತೆಲಂ ಗಾನ ರಾಜ್ಯಗಳು ಸಂಕಷ್ಟಕ್ಕೆ ಸಿಲುಕ ಲಿವೆ ಎಂಬ ದೂರುಗಳು ಬರತೊಡಗಿದೆ.

ಈಗಿನ ಲೆಕ್ಕಾಚಾರ ಪ್ರಕಾರ ಭಾರತದಲ್ಲಿ ಈಗ ಇರುವ ಜನಸಂಖ್ಯೆಯ ಆಧಾರದಲ್ಲಿ ಕೇಂದ್ರ ಸರಕಾರ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿದರೆ ಈಗ ಒಟ್ಟು ಇರುವ ೫೪೩ ಲೋಕಸಭಾ ಕ್ಷೇತ್ರಗಳಸಂಖ್ಯೆ ಇನ್ನು ೭೫೩ಕ್ಕೇರಲಿದೆ.

ದಕ್ಷಿಣ ಭಾರತದದಲ್ಲಿ  ಇತ್ತೀಚೆಗಿ ನಿಂದ ಜನಸಂಖ್ಯಾ ಏರಿಕೆ ದರ ಇಳಿಯತೊಡಗಿದ್ದು, ಅದರಿಂದಾಗಿ    ದಕ್ಷಿಣ ಭಾರತದ ರಾಜ್ಯಗಳಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯಲ್ಲಿ ಅಷ್ಟೇನೂ ಏರಿಕೆ ಉಂಟಾಗುವ ಸಾಧ್ಯತೆ ಇಲ್ಲ.  ಕೇರಳದಲ್ಲಿ ಈಗ ಒಟ್ಟು ೨೦ ಲೋಕಸಭಾ ಕ್ಷೇತ್ರಗಳಿವೆ.  ಆದರೆ ಈಗಿನ ಜನಸಂಖ್ಯೆಯ ಆಧಾರದಲ್ಲಿ  ನೋಡಿದಾಗ  ಕೇರಳದ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಈಗಿರುವ ೨೦ರಿಂದ ೧೯ಕ್ಕಿಳಿಯುವ ಸಾಧ್ಯತೆಯೂ ಇದೆಯೆನ್ನಲಾಗಿದೆ.

ಕರ್ನಾಟಕದಲ್ಲಿ ಈಗ ೨೬ ಲೋಕ ಸಭಾ ಕ್ಷೇತ್ರಗಳಿವೆ. ಜನಸಂಖ್ಯೆಯ ಆಧಾರದಲ್ಲಿ ನೋಡಿದರೆ ಅದು ೨೦೨೬ರಲ್ಲಿ ೩೬ಕ್ಕೇರುವ ಸಾಧ್ಯತೆ ಇದೆ. ಇದರಿಂದ ಕರ್ನಾಟಕಕ್ಕೆ ಹೆಚ್ಚೇನೂ ನಷ್ಟವುಂಟಾಗದು. ಜನಸಂಖ್ಯೆ ಏರಿಕೆ ಆಧಾರದಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ನಡೆಸಿದರೆ ಭಾರತದಲ್ಲಿ ಅತೀ ಹೆಚ್ಚು ಕ್ಷೇತ್ರಗಳಿರುವ ಉತ್ತರಪ್ರದೇಶದ ಈಗಿರುವ ೮೦ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಮುಂದೆ ೧೨೮ಕ್ಕೇರಲಿದೆ.  

ಇದೇ ರೀತಿ ಈಗ ೨೯ ಸ್ಥಾನ ಹೊಂದಿರುವ ಮಧ್ಯಪ್ರದೇಶದಲ್ಲಿ ಆ ಸಂಖ್ಯೆ ೪೭ಕ್ಕೇರಲಿದೆ. ಮಹಾರಾಷ್ಟ್ರ ದಲ್ಲಿ ಈಗಿರುವ ೪೮ ಲೋಕಸಭಾ ಬಲ ೬೮ಕ್ಕೇರಿಕೆಯಾಗಲಿದೆ.  ರಾಜಸ್ಥಾನದಲ್ಲಿ  ೨೫ ಸಂಖ್ಯೆ ೪೪ಕ್ಕೇರುವ ಸಾಧ್ಯತೆ ಇದೆಯೆಂದು ಲೆಕ್ಕಹಾಕಲಾಗಿದೆ.

ತಮಿಳುನಾಡಿನಲ್ಲಿ ಈಗಿರುವ ಸ್ಥಾನನ ೩೯ರಿಂದ ೪೧, ತೆಲಂಗಾನದಲ್ಲಿ ೧೭ರಿಂದ ೨೦, ಆಂಧ್ರಪ್ರದೇಶದಲ್ಲಿ ೨೫ರಿಂದ ೨೮ಕ್ಕೇರಲಿದೆ.

ಅಂದರೆ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಾಗುವಾಗ ಉತ್ತರಭಾರತಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿದೆ. ಹಾಗೆ ನಡೆದಲ್ಲಿ ಮುಂದೆ ಲೋಕಸಭೆ ಯಲ್ಲಿ ಉತ್ತರ  ಭಾರತದ ಜನಪ್ರಾತಿನಿಧ್ಯ  ಇನ್ನಷ್ಟು ಹೆಚ್ಚಾಗಲಿದೆ. ದಕ್ಷಿಣ ಭಾರತದ ಪ್ರಾತಿನಿಧ್ಯದಲ್ಲಿ ಕೇವಲ ನಾಮಮಾತ್ರ ದಷ್ಟು ಹೆಚ್ಚಳ ಮಾತ್ರವೇ ಉಂಟಾಗಲಿದೆ.

Leave a Reply

Your email address will not be published. Required fields are marked *

You cannot copy content of this page