ಪೊಸಡಿಗುಂಪೆಯಲ್ಲಿ ಎರಡು ದನದ ಕಳೇಬರ ಪತ್ತೆ: ಸ್ಥಳೀಯರಲ್ಲಿ ರೋಷ

ಪೈವಳಿಕೆ: ಬಾಯಾರು ಬಳಿಯ ಪೊಸಡಿಗುಂಪೆಯ ವ್ಯಕ್ತಿಯೊಬ್ಬರ ಹಿತ್ತಿಲಲ್ಲಿ ಎರಡು ದನದ ಕಳೇಬರ ಪತ್ತೆಯಾಗಿದೆ. ನಿನ್ನೆ ಸಂಜೆ ಇದು ಸ್ಥಳೀಯರ ಗಮನಕ್ಕೆ ಬಂದಿದೆ. ಕೂಡಲೇ ಸ್ಥಳೀಯರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ತಲುಪಿ ತನಿಖೆಗೆ ಚಾಲನೆ ನೀಡಿದ್ದಾರೆ.

ಈ ಪರಿಸರದಲ್ಲಿ ಈ ರೀತಿಯ ದನವನ್ನು ಯಾರು ನೋಡಿಲ್ಲವೆಂದೂ ದೂರದಿಂದ ತಂದು ಇಲ್ಲಿ ಉಪೇಕ್ಷಿಸಿರ ಬೇಕೆಂದೂ ಸ್ಥಳೀಯರು ಶಂಕಿಸಿದ್ದಾರೆ. ದನದ ದೇಹದಲ್ಲಿ ಯಾವುದೇ ಗಾಯಗಳಿಲ್ಲದಿರುವುದೂ ಶಂಕೆಗೆ ಬಲ ನೀಡಿದೆ. ಇಲ್ಲಿನ ಪರಿಸರದ ಜನರ ದನ ಕಾಣೆಯಾದುದಾಗಿ ತಿಳಿದು ಬಂದಿಲ್ಲ.   ಈ ಪರಿಸರಕ್ಕೆ ವಾಹನದಲ್ಲಿ ತ್ಯಾಜ್ಯವನ್ನು ತಂದು ಎಸೆಯುತ್ತಿರುವುದು ವ್ಯಾಪಕವಾ ಗಿದ್ದು, ಇದೇ ರೀತಿ ದನದ ಕಳೇಬರವನ್ನು ಕೂಡಾ ದೂರದಿಂದ ತಂದು ಉಪೇಕ್ಷಿ ಸಿರಬೇಕೆಂದು ಸ್ಥಳೀಯರು ಶಂಕಿಸುತ್ತಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸ್ಥಳೀಯರು ಪೊಲೀಸರಲ್ಲಿ ಆಗ್ರಹಿಸಿದ್ದಾರೆ. ಕಳೇಬರವನ್ನು ಪೋಸ್ಟ್ ಮಾರ್ಟಂ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

You cannot copy content of this page