ಬಂಗ್ರಮಂಜೇಶ್ವರ ಶಿವರಾತ್ರಿ ಮಹೋತ್ಸವ, ಏಕಾಹ ಭಜನೋತ್ಸವಕ್ಕೆ ಚಾಲನೆ
ಮಂಜೇಶ್ವರ : ಬಂಗ್ರಮAಜೇಶ್ವರ ಶ್ರೀ ಕಾಳಿಕಾಪರಮೇಶ್ವರಿ ದೇವಸ್ಥಾನ ದಲ್ಲಿ ಓಜ ಸಾಹಿತ್ಯ ಕೂಟ ಇದರ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ 65ನೇ ವರ್ಷದ ಏಕಾಹ ಭಜನೋ ತ್ಸವ ಇಂದು ಬೆಳಿಗ್ಗೆ ಆರಂಭಗೊAಡಿತು. ಪ್ರಾರ್ಥನೆ, ಶ್ರೀ ದೇವರಿಗೆ ಸೀಯಾಳ ಅಭಿಷೇಕ, ಪಂಚಾಮೃತ ಅಭಿಷೇಕ, ಅಲಂಕಾರ, ಬಳಿಕ ಬ್ರಹ್ಮಶ್ರೀ ವೇದ ಮೂರ್ತಿ ಪುರೋಹಿತ್.ಕೆ ಉಮೇಶ ತಂತ್ರಿ ಹಾಗೂ ಕ್ಷೇತ್ರದ ಪ್ರಧಾನ ಅರ್ಚಕÀ ಬ್ರಹ್ಮಶ್ರೀ ಪ್ರಕಾಶ್ಚಂದ್ರ ಶ್ರೌತಿ, ಓಜ ಸಾಹಿತ್ಯ ಕೂಟದ ಪದಾಧಿಕಾರಿಗಳು, ಕ್ಷೇತ್ರದ ಪದಾಧಿಕಾರಿಗಳು, ಮಹಿಳಾ ಸಂಘದ ಪದಾಧಿಕಾರಿಗಳು ದೀಪ ಪ್ರಜ್ವಲನೆ ಗೊಳಿಸಿ ಏಕಾಹ ಭಜನೆಗೆ ಚಾಲನೆ ನೀಡಿದರು. ನಾಳೆ ಸೂರ್ಯೋದಯಕ್ಕೆ ಮಂಗಳಾಚಾರಣೆ ನಡೆಯಲಿದೆ.