ಬಡಕುಟುಂಬಕ್ಕೆ ಮನೆ ನಿರ್ಮಿಸಲು ಮಾನವ ಸ್ನೇಹಿಗಳುರಂಗಕ್ಕಿಳಿಯುವುದರೊಂದಿಗೆ ಫಲಾನುಭವಿ ಬೀದಿ ಪಾಲಾಗುವ ಸ್ಥಿತಿಯತ್ತ-ಆರೋಪ
ಪೆರ್ಲ: ವಾಸಿಸಲು ಮನೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಬಡವನಾದ ಕೂಲಿ ಕಾರ್ಮಿ ಕನಿಗೆ ಸ್ವಂತವಾಗಿ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆಯೊಡ್ಡಿ ಲೀಗ್ ನೇತಾರರು ಚಾರಿಟಿ ಚಟುವಟಿಕೆಗಿಳಿದಾಗ ಫಲಾನುಭವಿಯಾದ ಎಣ್ಮಕಜೆ ಪಂಚಾಯತ್ ೧೩ನೇ ವಾರ್ಡ್‌ನ ಅಬ್ದುಲ್ ರಜಾಕ್ ಶೇಣಿ ಎಂಬವರು ಬೀದಿ ಪಾಲಾಗುವ ಸ್ಥಿತಿಗೆ ತಲುಪಿದೆಯೆಂದು ನಾಗರಿಕರು ಆರೋಪಿಸುತ್ತಿದ್ದಾರೆ.
ಅಬ್ದುಲ ರಜಾಕ್, ಪತ್ನಿ ಹಾಗೂ ಇಬ್ಬರು ಮಕ್ಕಳಿರುವ ಕುಟುಂಬಕ್ಕೆ ಮನೆ ನಿರ್ಮಿಸಲು ಮಾನವೀಯ ತೆಯುಳ್ಳ ವ್ಯಕ್ತಿಯೊಬ್ಬರು ಐದು ಸೆಂಟ್ ಸ್ಥಳ ನೀಡಿರುವುದಾಗಿ ಹೇಳಲಾಗುತ್ತಿದೆ. ಆ ಸ್ಥಳದಲ್ಲಿ ನಾವು ಮನೆ ನಿರ್ಮಿಸಿಕೊಡುವುದಾಗಿ ತಿಳಿಸಿ ಲೀಗ್ ಪಂಚಾಯತ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಯಾನೆ ಅಂದ ಗುಣಾಜೆ ಎಂಬವರು ರಂಗಕ್ಕಿಳಿದಿದ್ದರು. ಮಾನವೀಯತೆ ಯುಳ್ಳ ಇತರ ನೇತಾರರೂ ಅವರನ್ನು ಬೆಂಬಲಿಸಿದರು. ಅಬ್ದುಲ್ ರಹ್ಮಾನ್ ಅಧ್ಯಕ್ಷ, ವಾರ್ಡ್ ಲೀಗ್ ಕಾರ್ಯದರ್ಶಿ ಮುಸ್ತಫ ಒಳಮೊಗರು ಕನ್ವೀನರ್ ಆಗಿರುವ ಕಟ್ಟಡ ನಿರ್ಮಾಣ ಸಮಿತಿ ರೂಪೀಕರಿಸ ಲಾಯಿತು. ಊರಿನಲ್ಲೂ, ಪರವೂರಿನಲ್ಲೂ ಕಟ್ಟಡ ನಿರ್ಮಾ ಣ ನಿಧಿಗೆ ಹಣ ಸಂಗ್ರಹಿಸಿರುವುದಾಗಿ ಹೇಳಲಾಗುತ್ತಿದೆ. ಐದು ಲಕ್ಷ ರೂಪಾಯಿ ಸಂಗ್ರಹಿಸಲು ನಿರ್ಧರಿಸಲಾಗಿತ್ತು. ಚಾರಿಟಿ ಚಟುವಟಿಕೆಯಲ್ಲಿ ಈ ಹಿಂದೆಯೂ ಸಕ್ರಿಯನಾಗಿದ್ದ ಅಂದ ಗುಣಾಜೆ ಆ ಮೊತ್ತವನ್ನು ಅನಾಯಾಸವಾಗಿ ಸಂಗ್ರಹಿಸುವರೆಂದೂ ಶೀಘ್ರದಲ್ಲೇ ಮನೆ ನಿರ್ಮಾಣ ಕೆಲಸ ಪೂರ್ತಿಗೊಳಿಸುವುದಾಗಿ ಭಾವಿಸಿರುವುದಾಗಿ ನಾಗರಿಕರು ತಿಳಿಸಿದ್ದಾರೆ. ಆದರೆ ನಿಧಿ ಸಂಗ್ರಹ ಉದ್ದೇಶಿಸಿದ ರೀತಿಯಲ್ಲಿ ನಡೆದಿಲ್ಲವೆಂದು ವಸತಿ ನಿರ್ಮಾಣ ಸಮಿತಿ ಕನ್ವೀನರ್ ‘ಕಾರವಲ್’ಗೆ ತಿಳಿಸಿದ್ದಾರೆ. ಲಭಿಸಿದ ಮೊತ್ತವನ್ನು ಫಲಾನು ಭವಿಯ ಪತ್ನಿಯ ಬ್ಯಾಂಕ್ ಖಾತೆಯಲ್ಲಿ ಠೇವಣಿಯಿರಿಸಲಾಗಿದೆ. ಆ ಮೊತ್ತವನ್ನು ಬಳಸಿ ಮನೆಯ ಅಡಿಪಾಯ ಹಾಗೂ ಗೋಡೆ ನಿರ್ಮಿಸಲಾಗಿದೆಯೆಂದು ಕನ್ವೀನರ್ ಮುಸ್ತಫ ತಿಳಿಸಿದ್ದಾರೆ.
ಇದೀಗ ಅಬ್ದುಲ್ ರಜಾಕ್ ಶೇಣಿ ಅವರನ್ನು ಪಂಚಾಯತ್ ಲೈಫ್ ವಸತಿ ಯೋಜನೆಯಲ್ಲಿ ಸೇರಿಸಲಾಗಿ ದೆಯೆಂದೂ ಅದರಿಂದ ಸಹಾಯ ಲಭಿಸಿದರೆ ಕೆಲಸ ಪೂರ್ತಿಗೊಳಿಸಲು ಸಾಧ್ಯವಿದೆಯೆಂಬ ನಿರೀಕ್ಷೆಯಿದೆಯೆಂದು ಅವರು ತಿಳಿಸಿದ್ದಾರೆ. ಆದರೆ ಹಲವು ವರ್ಷಗಳಿಂದ ತಾನು ಲೈಫ್ ವಸತಿ ಯೋಜನೆಯ ಯಾದಿಯಲ್ಲಿದ್ದೇನೆಂದು ಅಬ್ದುಲ್ ರಜಾಕ್ ಶೇಣಿ ತಿಳಿಸಿದ್ದಾರೆ. ತನ್ನಂತೆ ಇನ್ನೂ ಹಲವು ಮಂದಿ ಆ ಯಾದಿಯಲ್ಲಿದ್ದಾರೆ. ಯಾವುದೇ ಕ್ಷಣದಲ್ಲಿ ಕುಸಿದು ಬೀಳಬಹುದಾದ ಬಾಡಿಗೆ ಕಟ್ಟಡವೊಂದರಲ್ಲಿ ಇದೀಗ ತಾನು ವಾಸಿಸುತ್ತಿದ್ದೇನೆ. ಕೂಲಿ ಕೆಲಸದಿಂದ ಲಭಿಸುವ ಆದಾಯ ದಿಂದ ಕಷ್ಟಪಟ್ಟು ಕುಟುಂಬವನ್ನು ಸಾಕುತ್ತಿರು ವುದಾಗಿ ಅವರು ತಿಳಿಸಿದ್ದಾರೆ.
ಇಂತಹವೊಂದು ಸ್ಥಿತಿ ಇದೆಯೆಂದೂ ಆ ಬಗ್ಗೆ ಸ್ಪಷ್ಟ ಮಾಹಿತಿಗಳು ಕಮಿಟಿಯ ಪದಾಧಿಕಾರಿಗಳಿಗೆ ತಿಳಿದಿರಬಹುದೆಂದು ಇದೇ ವಾರ್ಡ್‌ನ ಸದಸ್ಯನಾದ ಮುಸ್ಲಿಂ ಲೀಗ್ ಮಂಡಲ ಜತೆ ಕಾರ್ಯದರ್ಶಿ ಸಿದ್ದಿಕ್ ಒಳಮೊಗರು ತಿಳಿಸಿದ್ದಾರೆ.
ಮಳೆ ಸುರಿಯುವುದಕ್ಕಿಂತ ಮೊದಲು ಮನೆ ನಿರ್ಮಾಣ ಪೂರ್ತಿಗೊಳಿಸದಿದ್ದರೆ ಇದುವರೆಗೆ ನಡೆದ ನಿರ್ಮಾಣ ಚಟುವಟಿಕೆ ವ್ಯರ್ಥವಾಗಲಿದೆ ಎಂದೂ ನಾಗರಿಕರು ತಿಳಿಸುತ್ತಿದ್ದಾರೆ. ಮನೆ ನಿರ್ಮಾಣ ಕೆಲಸ ಆರಂಭಿಸಿಲ್ಲವಾಗಿದ್ದರೆ ಮಳೆಗಾಲದಲ್ಲಿ ಗುಡಿಸಲು ನಿರ್ಮಿಸಿ ಯಾದರೂ ವಾಸಿಸಬಹುದಾಗಿ ತ್ತೆಂದೂ ಅವರು ತಿಳಿಸುತ್ತಿದ್ದಾರೆ . ಇನ್ನು ಇದೀಗ ನಿರ್ಮಿಸಿದ ರೀತಿಯ ಕಟ್ಟಡವನ್ನು ಬದಲಾಯಿಸಲೂ ಸಾಧ್ಯವಿಲ್ಲ. ನಾಗರಿಕರು, ಜಮಾಅತ್ ಹಾಗೂ ಸಂಬಂಧಿಕರು ಹಣ ಸಂಗ್ರಹಿಸಿ ಮನೆ ನಿರ್ಮಿಸಿ ನೀಡುತ್ತಿದ್ದರು. ಆದರೆ ಮನೆ ಇಷ್ಟರ ಮಟ್ಟಿಗೆ ತಲುಪಿದುದರಿಂದ ಅವರು ಕೂಡಾ ಮಧ್ಯಪ್ರವೇಶಿಸಲು ಸಾಧ್ಯತೆ ಇಲ್ಲವೆಂದೂ ಹೇಳಲಾಗುತ್ತಿದೆ.
ಇದೇ ವೇಳೆ ಮನೆಯನ್ನು ಯಾವುದೇ ರೀತಿಯಲ್ಲಾದರೂ ಪೂರ್ತಿಗೊಳಿಸುವುದಾಗಿ ಮುಸ್ತಫ ಒಳಮೊಗರು ತಿಳಿಸುತ್ತಿದ್ದಾರೆ.