ಬದಿಯಡ್ಕದಿಂದ ನಾಪತ್ತೆಯಾದ ಆಟೋಚಾಲಕನಿಗಾಗಿ ಮುಂದುವರಿದ ಶೋಧ

ಬದಿಯಡ್ಕ: ಬದಿಯಡ್ಕದಿಂದ ನಿಗೂಢ ರೀತಿಯಲ್ಲಿ ನಾಪತ್ತೆಯಾದ ಆಟೋಚಾಲಕ ಎಲ್ಲಿದ್ದಾನೆಂಬ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಆತನನ್ನು ಪತ್ತೆಹಚ್ಚಲಿರುವ ಶೋಧಕಾರ್ಯವನ್ನು ಸಂಬಂಧಿಕರು ಹಾಗೂ ಪೊಲೀಸರು ಮುಂದುವರಿಸಿದ್ದಾರೆ. ಕನ್ಯಪ್ಪಾಡಿ ಬಳಿಯ ಕರ್ಕಟಪಳ್ಳ ನಿವಾಸಿಯೂ ಬದಿಯಡ್ಕದ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದ ನಿತಿನ್ ಕುಮಾರ್ (29) ಸೆ.12ರಿಂದ ನಾಪತ್ತೆಯಾಗಿದ್ದಾರೆ.  ಬದಿಯಡ್ಕ ಮೇಲಿನ ಪೇಟೆಯಲ್ಲಿ ಆಟೋರಿಕ್ಷಾ ಬಾಡಿಗೆ ನಡೆಸುತ್ತಿದ್ದ ಇವರು ಎಂದಿನಂತೆ ಸೆ. 12ರಂದು ಬೆಳಿಗ್ಗೆ ತೆರಳಿದ್ದರು. ಅನಂತರ ಮನೆಗೆ ಮರಳಿ ಬಂದಿಲ್ಲ. ಇದರಿಂದ ಅವರಿಗಾಗಿ ಹುಡುಕಾಡುತ್ತಿದ್ದಾಗ ನಿತಿನ್ ಕುಮಾರ್‌ರ ಆಟೋ ರಿಕ್ಷಾ ಬದಿಯಡ್ಕ ಸಿಎಚ್‌ಸಿ ಸಮೀಪ ಪತ್ತೆಯಾಗಿತ್ತು. ಕೀಲಿಕೈ ಆಟೋರಿಕ್ಷಾದಲ್ಲೇ ಇರಿಸಲಾಗಿತ್ತು.

ನಿತಿನ್ ಕುಮಾರ್‌ರ ಮೊಬೈಲ್‌ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆದ ಸ್ಥಿತಿಯಲ್ಲಿರುವುದು ತಿಳಿದು ಬಂದಿದೆ. ನಾಪತ್ತೆಯಾಗುವ ಮುಂಚೆ ನಿತಿನ್ ಕುಮಾರ್ ಸ್ನೇಹಿತರೊಂದಿಗೆ ಹಲವು ರೀತಿಯಲ್ಲಿ ತಿಳಿಸಿದ್ದರೆನ್ನಲಾಗಿದೆ. ಈಗಾಗಲೇ ಸಂಬಂಧಿಕರ ಮನೆಗಳ ಸಹಿತ ವಿವಿಧೆಡೆ ಹುಡುಕಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ನಿಗೂಢತೆ ಹೆಚ್ಚಿಸಿದೆ.

Leave a Reply

Your email address will not be published. Required fields are marked *

You cannot copy content of this page