ಕುಂಬಳೆ: ನಕಲಿ ನಂಬ್ರಪ್ಲೇಟ್ ಲಗತ್ತಿಸಿದ ಕಾರು ವಶ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿ ದ್ದಾರೆ. ಇದೇ ವೇಳೆ ವಶಕ್ಕೆ ತೆಗೆಯಲಾದ ಕಾರು ಮಳ್ಳಂಗೈ ನಿವಾಸಿಯಾದ ಅಲಿ ಮುಕ್ತಾದ್ರ ದ್ದೆಂದು ತಿಳಿದುಬಂದಿದೆ. ವ್ಯಾಪಾರಿ ಯಾಗಿರುವ ಅಲಿ ಮುಕ್ತಾದ್ರನ್ನು ಅಗೋಸ್ತ್ ೩೧ರಂದು ಬಂದ್ಯೋಡು ಬಳಿಯ ಅಡ್ಕ ಗುರ್ಮೆ ಎಂಬಲ್ಲಿ ತಂಡವೊಂದು ತಡೆದು ನಿಲ್ಲಿಸಿ ಹಲ್ಲೆಗೈದು ಅವರ ಕಾರನ್ನು ಅಪಹರಿಸಿತ್ತು. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಇದೇ ವೇಳೆ ಮೊನ್ನೆ ಚೇವಾರು ರೆಸೋರ್ಟ್ ಬಳಿ ಶಂಕಾಸ್ಪದ ರೀತಿಯಲ್ಲಿ ಕಾರು ಪತ್ತೆಯಾಗಿತ್ತು.
ಬಳಿಕ ನಡೆಸಿದ ತನಿಖೆಯಲ್ಲಿ ಕಾರಿಗೆ ನಕಲಿ ನಂಬ್ರಪ್ಲೇಟ್ ಅಳವ ಡಿಸಿರು ವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದ ಕಯ್ಯಾರು ಮೇರ್ಕಳ ಕಯ್ಯಾರು ಹೌಸ್ನ ಮೂಸ ಅಪ್ಸಲ್ (26), ಪಚ್ಚಂಬಳ ಪಳ್ಳತ್ತೊಟ್ಟಿ ನಿಜಾಮ್ ಮಂಜಿಲ್ನ ನಿಜಾಮು ದ್ದೀನ್(19) ಎಂಬಿವರನ್ನು ಪೊಲೀ ಸರು ಬಂಧಿಸಿದ್ದರು. ಬಳಿಕ ನಡೆಸಿದ ತನಿಖೆಯಲ್ಲಿ ಈ ಕಾರನ್ನು ಬೇರೊಬ್ಬ ವ್ಯಕ್ತಿಯಿಂದ ಇವರು ಬಾಡಿಗೆಗೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕಾರನ್ನು ಇವರಿಗೆ ಬಾಡಿಗೆಗೆ ನೀಡಿದ ವ್ಯಕ್ತಿಯ ಪತ್ತೆಗಾಗಿ ತನಿಖೆ ತೀವ್ರಗೊಳಿಸಲಾ ಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.






