ಕಾಲೇಜು ಯೂನಿಯನ್ ಚುನಾವಣೆ: ಕುಂಬಳೆಯಲ್ಲಿ ಘರ್ಷಣೆಯ ಹಂತಕ್ಕೆ ತಲುಪಿದ ವಿಜಯೋತ್ಸವ

ಕುಂಬಳೆ:  ಕಾಲೇಜು ಯೂನಿಯನ್ ಚುನಾವಣೆಯ ಬಳಿಕ ಕುಂಬಳೆಯಲ್ಲಿ ಎಬಿವಿಪಿ ಹಾಗೂ ಎಸ್‌ಎಫ್‌ಐ ನಡೆಸಿದ  ವಿಜಯೋತ್ಸವ ಮೆರವಣಿಗೆ ಸಂಘರ್ಷಾವಸ್ಥೆಯ ಸ್ಥಿತಿಗೆ ತಲುಪಿತ್ತು.  ಕೂಡಲೇ ಅಲ್ಲಿಗಾಗಮಿಸಿದ ಪೊಲೀಸರು  ಪರಿಸ್ಥಿತಿಯನ್ನು ಹತೋ ಟಿಗೆ ತಂದರು. ಕುಂಬಳೆ ಐಎಚ್‌ಆರ್‌ಡಿ ಕಾಲೇಜಿನ 15 ಸೀಟುಗಳ ಪೈಕಿ 9 ಸೀಟುಗಳನ್ನು ಎಬಿವಿಪಿ ಹಾಗೂ 5ರಲ್ಲಿ ಎಸ್‌ಎಫ್‌ಐ ಗೆಲುವು ಸಾಧಿಸಿತ್ತು. ಒಂದು ಸೀಟನ್ನು  ಕೆಎಸ್‌ಯು-ಎಂಎಸ್‌ಎಫ್ ಒಕ್ಕೂಟ ಗೆದ್ದುಕೊಂ ಡಿತ್ತು. ಫಲಿತಾಂಶ ಪ್ರಕಟಗೊಂಡ ಬಳಿಕ  ಗೆಲುವು ಸಾಧಿಸಿದ ಅಭ್ಯರ್ಥಿಗಳ ಸಹಿತ ವಿದ್ಯಾರ್ಥಿಗಳು  ವಿಜಯೋತ್ಸವ ಮೆರವಣಿಗೆ ನಡೆಸಿದ್ದಾರೆ. ಎಬಿವಿಪಿ ಹಾಗೂ ಎಸ್‌ಎಫ್‌ಐಯ ಮೆರವಣಿಗೆ ಕುಂಬಳೆ ಸಿಪಿಎಂ ಕಚೇರಿ ಸಮೀಪಕ್ಕೆ ತಲುಪಿದಾಗ ಎರಡೂ ತಂಡಗಳು ಮುಖಾಮುಖಿಯಾಗಿದ್ದು, ಇದು ಘರ್ಷಣೆಯ ಹಂತಕ್ಕೆ ತಲುಪಿದೆ.  ಈ ವಿಷಯವನ್ನು ನಾಗರಿಕರು ಪೊಲೀಸರಿಗೆ ತಿಳಿಸಿದ್ದು, ತಕ್ಷಣ ಸ್ಥಳಕ್ಕೆ ತಲುಪಿದ ಪೊಲೀಸರು ವಿಜಯೋತ್ಸವಕ್ಕೆ ತಡೆಯೊಡ್ಡಿದ್ದಾರೆ. ಬಳಿಕ ಎರಡೂ ಸಂಘಟನೆಗಳ ಕಾರ್ಯಕರ್ತರನ್ನು ಅವರ ಮನೆಗೆ ಹೋಗುವಂತೆ ತಿಳಿಸಿದರು.  ಇದರಿಂದ ಸ್ಥಿತಿಗತಿ ಸಮಾಧಾನವಾಗಿ ಕೊನೆಗೊಂಡಿದೆ.

You cannot copy contents of this page