ಬಲವಾದ ಗಾಳಿ, ಮಳೆ: ದಡದಲ್ಲಿ ನಿಲ್ಲಿಸಿದ್ದ ಮೀನುಗಾರಿಕಾ ಬೋಟ್ ನೀರುಪಾಲು

ಹೊಸದುರ್ಗ: ನೀಲೇಶ್ವರ ತೈಕಡಪ್ಪುರ ಹೊಳೆಯಲ್ಲಿ ನಿಲ್ಲಿಸಲಾಗಿದ್ದ ಮೀನುಗಾರಿಕಾ ದೋಣಿ ನೀರುಪಾ ಲಾಗಿದೆ. ಬಲವಾದ ಗಾಳಿಗೆ ಈ ದೋಣಿ ಸಂಪೂರ್ಣವಾಗಿ ಹಾನಿಗೊಂ ಡಿದೆ. ಚೆರ್ವತ್ತೂರು ಮಡಕ್ಕರ ಕಾವುಂಜಿರ ನಿವಾಸಿ ಶ್ರೀನಾಥ್‌ರ ಮಾಲಕತ್ವದ ಕಾರ್ತಿಕ ಎಂಬ ದೋಣಿ ಈ ರೀತಿ ಹಾನಿಯಾಗಿದೆ. ಇಂದು ಮುಂಜಾನೆ 4.30 ವೇಳೆ ಘಟನೆ ನಡೆದಿದೆ. ತೀವ್ರ ಮಳೆ ಹಾಗೂ ಗಾಳಿಗೆ ದಡದಲ್ಲಿ ಕಟ್ಟಿ ನಿಲ್ಲಿಸಿದ್ದ ದೋಣಿ ನೀರುಪಾಲಾಗಿದ್ದು, ಈ ವೇಳೆ ದೋಣಿಯಲ್ಲಿದ್ದ ಮೀನು ಕಾರ್ಮಿಕರು ದಡ ಸೇರಿ ಪಾರಾಗಿದ್ದಾರೆ. ನೀರಿನಲ್ಲಿ ತೇಲುತ್ತಿದ್ದ ದೋಣಿ ಬಳಿಕ ಕಲ್ಲಿಗೆ ಬಡಿದು ಹಾನಿಗೊಂಡಿದೆ. ಕರಾವಳಿ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.

Leave a Reply

Your email address will not be published. Required fields are marked *

You cannot copy content of this page