ಬಸ್‌ನಲ್ಲಿ ಕಳವು: ಸೆರೆಯಾದ ತಮಿಳುನಾಡು ನಿವಾಸಿಗಳಾದ ಮಹಿಳೆಯರು ಕಳವು ತಂಡದ ಪ್ರಧಾನ ಕೊಂಡಿಗಳು
ಮಂಜೇಶ್ವರ: ಕುಂಜತ್ತೂರಿನಲ್ಲಿ ಬಸ್ ಪ್ರಯಾಣಿಕೆಯ ಬ್ಯಾಗ್‌ನಿಂದ ಚಿನ್ನಾಭರಣ, ಮೊಬೈಲ್ ಫೋನ್, 8000 ರೂ. ಕಳವುಗೈದ ತಮಿಳುನಾಡು ನಿವಾಸಿಗಳಾದ ಮೂರು ಮಂದಿಯನ್ನು ಉಪ್ಪಳದಿಂದ ಮಂಜೇಶ್ವರ ಪೊಲೀಸರು ಬಂಧಿಸಿದ್ದು, ಇವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ತಮಿಳುನಾಡು ಮಧುರೈ ನಿವಾಸಿ ಸುಮತಿ (34), ತೂತುಕುಡಿ ನಿವಾಸಿಗಳಾದ ರಂಜಿತ (32), ಪಾರ್ವತಿ (42) ಎಂಬಿವರನ್ನು ಮಂಜೇ ಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ.
ಹಲವಾರು ಕಳವು ಪ್ರಕರಣಗಳಲ್ಲಿ ಆರೋಪಿಗಳಾದ ಇವರು ತಮಿಳುನಾಡಿ ನಿಂದ ಕೇರಳಕ್ಕೆ ತಲುಪಿ ಕಳವು ನಡೆಸುವ ತಂಡದ ಪ್ರಧಾನ ಕೊಂಡಿಗಳೆಂದು ಪೊಲೀಸರು ತಿಳಿಸಿದ್ದಾರೆ. ಇವರನ್ನು ಪ್ರಶ್ನಿಸಿದಾಗ ಈ ತಂಡದ ಹಲವರ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಜೇಶ್ವರ ಎಸ್‌ಐ ರತೀಶ್‌ಗೋಪಿ, ಸಿಪಿಒಗಳಾದ ಸುಜಿತ್, ವಿಜಯನ್, ವಂದನ, ಸೋ ನಿಯ, ಗ್ರೀಷ್ಮಾ ಎಂಬಿವರ ತಂಡ ಆರೋ ಪಿಗಳನ್ನು ಸೆರೆಹಿಡಿದಿದೆ. ಮಂಜೇಶ್ವರ ಮಾಡ ನಿವಾಸಿ ಪ್ರಭಾಕರ್‌ರ ಪತ್ನಿ ತಾರಾಮಣಿ (59) ಮಂಗಳವಾರ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಬ್ಯಾಗನ್ನು ಆರೋಪಿಗಳು ಕಳವು ನಡೆಸಿದ್ದರು.