ಬಸ್ನಲ್ಲಿ ಸಾಗಿಸುತ್ತಿದ್ದ ಮದ್ಯ ವಶ
ಉಪ್ಪಳ: ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೇರಳ ರಾಜ್ಯ ಸಾರಿಗೆ ಬಸ್ನಿಂದ 6.165 ಲೀಟರ್ ಕರ್ನಾಟಕ ಮದ್ಯವನ್ನು ಅಬಕಾರಿ ಅಧಿಕಾರಿಗಳು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ನಿನ್ನೆ ಮಂಜೇಶ್ವರ ಅಬಕಾರಿ ಚೆಕ್ಪೋ ಸ್ಟ್ನಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಬಸ್ನೊಳಗೆ ಮದ್ಯ ಪತ್ತೆಯಾಗಿದೆ. ಆದರೆ ಈ ಸಂಬಂಧ ಯಾರನ್ನೂ ಬಂಧಿಸಲಾಗಲಿಲ್ಲ. ಅಬಕಾರಿ ಇನ್ ಸ್ಪೆಕ್ಟರ್ ಗಂಗಾಧರನ್ ಕೆ.ಪಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.