ಬಾಲಕೃಷ್ಣನ್ ಮಾಸ್ತರ್‌ರನ್ನು ಜಯಗೊಳಿಸಲು ಡಿಫಿ ಕರೆ

ಪೈವಳಿಕೆ : ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಎಡರಂಗದ ಅಭ್ಯರ್ಥಿ ಎಂ ವಿ ಬಾಲಕೃಷ್ಣನ್ ಮಾಸ್ತರ್‌ರನ್ನು ಜಯಗೊಳಿಸಲು ಡಿಪಿs ಪೈವಳಿಕೆ ವಿಲೇಜ್ ಸಮಿತಿ ಆಗ್ರಹಿಸಿದೆ. ದೇಶವನ್ನು ಆಳ್ವಿಕೆ ನಡೆಸುತ್ತಿರುವ ಮೋದಿ ಸರಕಾರ ಯುವಜನತೆಯನ್ನು ವಂಚಿಸಿದೆ, ಉದ್ಯೋಗದ ಭರವಸೆಯನ್ನು ನೀಡಿ ಆಡಳಿತಕ್ಕೆ ಬಂದ ಬಿಜೆಪಿ ಸರಕಾರ ಉದ್ಯೋಗ ಸೃಷ್ಟಿಸಲು ಸಾಧ್ಯವಾಗದೇ ನಿರುದ್ಯೋಗ ಸಮಸ್ಯೆಯನ್ನು ಹೆಚ್ಚಿಸಿದೆ. ರೈತ, ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿ ಜನರನ್ನು ಬೀದಿಗೆ ತಲುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದು ದೇಶದ ಧರ್ಮನಿರಪೇಕ್ಷತೆಯನ್ನು ಇಲ್ಲದಂತೆ ಮಾಡಿ, ಮುಸ್ಲಿಂ ವಿಭಾಗದವರನ್ನು ದ್ವಿತೀಯ ಪೌರರಂತೆ ಮಾಡಿ ದೇಶದ ಸಂವಿಧಾನ ಮೌಲ್ಯಕ್ಕೆ ಮಸಿ ಬಳಿಯುತ್ತಿದೆ. ಇದರ ವಿರುದ್ದ z್ವsÀನಿ ಎತ್ತಲೂ ಕಾಂಗ್ರೆಸ್ ಸಂಸದರಿAದ ಸಾಧ್ಯವಾಗಲಿಲ್ಲ. ಯುವಜನರ ಸಮಸ್ಯೆಯ ವಿರುದ್ದವಾಗಲಿ, ಕಪ್ಪು ಕಾನೂನುಗಳ ವಿರುದ್ದ ಯಾವುದೇ ಮಾತುಗಳನ್ನು ಆಡಲು ಸಂಸದರಿಗೆ ಸಾಧ್ಯವಾಗಲಿಲ್ಲ. ಕೇರಳದ ಅಗತ್ಯಕ್ಕಾಗಿ ಒಂದಕ್ಷರ ಮಾತನಾಡದ ಕಾಸರಗೋಡು ಸಂಸದರ ನಡವಳಿಕೆ ವಿರುದ್ದ ಜನರು ಉತ್ತರ ನೀಡಲಿದ್ದಾರೆ ಎಂದು ಡಿಪಿs ತಿಳಿಸಿದೆ. ಬಿಜೆಪಿಯ ಅವಿಶ್ವಾಸಗೊತ್ತುವಳಿ ಬೆಂಬಲ ನೀಡಿದ ಪೈವಳಿಕೆಯ ಕಾಂಗ್ರೆಸ್ ಸದಸ್ಯ ಅವಿನಾಶ್ ಅವರು ಕಾಸರಗೋಡು ಕಾಂಗ್ರೆಸ್ ಸಂಸದರ ಒಡನಾಡಿಯಾಗಿದ್ದಾರೆ. ಅವರ ಚುನಾವಣಾ ಪ್ರಚಾರಕ್ಕೆ ಬೇಕಾಗಿ ದೈನಂದಿನ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲೇ ಬಿಜೆಪಿಗೆ ಮತ ನೀಡಿದ್ದಾರೆ. ಕೇರಳವನ್ನು ಆರ್ಥಿಕವಾಗಿ ದಿಗ್ಬಂಧನಗೊಳಿಸಿದ ಕೇಂದ್ರದ ಬಿಜೆಪಿಯ ವಿರುದ್ದ ಹಾಗೂ ಕೇರಳಕ್ಕೆ ಬೇಕಾದ ಯಾವುದೇ ಮಾತುಗಳನ್ನು ಆಡಲು ತಯಾರಾಗದ ಕಾಂಗ್ರೆಸ್ ಸಂಸದರ ವಿರುದ್ಧ ಕಾಸರಗೋಡು ಜನತೆಯು ತೀರ್ಪು ನೀಡಲಿದ್ದಾರೆ. ಎಂದು ಡಿಪಿs ಪೈವಳಿಕೆ ವಿಲೇಜ್ ಸಮಿತಿ ಕಾರ್ಯದರ್ಶಿ ಆಕಾಶ್ ಕೊರಿಕ್ಕಾರ್, ಅಧ್ಯಕ್ಷ ಮಹೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page