ಬೇಡಡ್ಕದಲ್ಲಿ ಪೋಕ್ಸೋ ಪ್ರಕರಣ: ಇನ್ನೋರ್ವ ಸೆರೆ
ಬೇಡಗಂ: ಹದಿನೈದರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಇನ್ನೋ ರ್ವನನ್ನು ಬಂಧಿಸಲಾಗಿದೆ. ಕುಂಡುಚ್ಚಿ ನಿವಾಸಿ ಸತ್ಯ (೪೦) ಎಂಬಾತನನ್ನು ಸ್ಪೆಷಲ್ ಮೊಬೈಲ್ ಸ್ಕ್ವಾಡ್ ಡಿವೈಎಸ್ಪಿ ನೇತೃತ್ವದ ತಂಡ ಬಂಧಿಸಿದೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ. ಪ್ರಾಯಪೂರ್ತಿ ಯಾಗದ ಬಾಲಕಿಗೆ ಕಿರುಕುಳ ನೀಡಿದ ಸಂಬಂಧ ಈಮೊದಲು ಬೇಡಗಂ ಪೊಲೀಸರು ೧೫ ಪ್ರಕರಣಗಳನ್ನು ದಾಖಲಿಸಿ ಕೊಂಡಿದ್ದರು. ಇದ ರಲ್ಲಿ ಆರು ಪ್ರಕರಣಗಳನ್ನು ಪರಿ ಶಿಷ್ಟ ಜಾತಿ-ವರ್ಗ ನಿಯಮ ಪ್ರಕಾರ ಎಸ್ಎಂಎಸ್ಗೆ ಹಸ್ತಾಂ ತರಿಸ ಲಾಗಿದೆ. ಇತರ ಪ್ರಕರಣ ಗಳಲ್ಲಿ ಆರೋಪಿಗಳಿಗಾಗಿ ಪೊಲೀ ಸರು ತನಿಖೆ ತೀವ್ರಗೊಳಿಸಿದ್ದಾರೆ.