ಭೂಮಿಯ ದಾಖಲು ಪತ್ರ ತಯಾರಿಸಲು ಲಂಚ ಪಡೆದ ವಿಲ್ಲೇಜ್ ಫೀಲ್ಡ್ ಅಸಿಸ್ಟೆಂಟ್ ಬಂಧನ
ಕಾಸರಗೋಡು: ಭೂಮಿಯ ದಾಖಲು ಪತ್ರ ಸರಿಪಡಿಸಿ ನೀಡಲು ಲಂಚ ಪಡೆದ ಕಂದಾಯ ಇಲಾಖೆ ನೌಕರನನ್ನು ವಿಜಿಲೆನ್ಸ್ ಕೈಯ್ಯಾರೆ ಸೆರೆ ಹಿಡಿದಿದೆ.
ಅಡೂರು ಗ್ರಾಮ ಕಚೇರಿಯ ವಿಲ್ಲೇಜ್ ಫೀಲ್ಡ್ ಅಸಿಸ್ಟೆಂಟ್ ಕಾರಡ್ಕ ಬಳಿಯ ಕರ್ಮಂತೋಡಿ ನಿವಾಸಿ ಕೆ. ನಾರಾಯಣನ್ (೪೭) ಬಂಧಿತ ವ್ಯಕ್ತಿ. ಇವರನ್ನು ವಿಜಿಲೆನ್ಸ್ ಡಿವೈಎಸ್ಪಿ ಪಿ. ಉಣ್ಣಿ ಕೃಷ್ಣನ್ ನೇತೃತ್ವದ ತಂಡ ಬಂಧಿಸಿದೆ. ನಾರಾಯಣನ್ ದೂರುದಾತನಿಂದ ಪಡೆದು ಕಾರಿನಲ್ಲಿರಿಸಿದ್ದ ೨೦,೦೦೦ ರೂಪಾ ಯಿಯನ್ನು ವಶಪಡಿಸಲಾಗಿದೆ. ಆದೂರು ಆಲಂತಡ್ಕದ ಪಿ. ರಮೇಶನ್ ಎಂಬಿವರಿಂದ ವಿಲ್ಲೇಜ್ ಫೀಲ್ಡ್ ಅಸಿಸ್ಟೆಂಟ್ ನಾರಾಯಣನ್ ಲಂಚ ಪಡೆದುಕೊಂಡಿರುವುದಾಗಿ
ದೂರ ಲಾಗಿದೆ.
ರಮೇಶನ್ರ ತರವಾಡು ಮನೆ ಹಾಗೂ ಕುಟುಂಬ ಕ್ಷೇತ್ರ ಅಡೂರು ವಿಲ್ಲೇಜ್ನ ಪಾಂಡಿವಯಲ್ನಲ್ಲಿದೆ. ಅಲ್ಲಿ ಅವರ ತಾಯಿಯ ಚಿಕ್ಕಮ್ಮನ ಮಗಳು ವಾಸಿಸುತ್ತಿದ್ದಾರೆ. ಅಲ್ಲಿರುವ ೫೪ ಸೆಂಟ್ ಸ್ಥಳದಲ್ಲಿ ಹಲವು ವರ್ಷಗಳಿಂದಲೂ ವಾಸಿಸುತ್ತಿದ್ದರೂ ಪಟ್ಟಾ ಲಭಿಸಿರಲಿಲ್ಲ. ಇದರಿಂದ ೨೦೨೩ ಸೆಪ್ಟೆಂಬರ್ ೧೬ರಂದು ಕಾಸರಗೋಡು ಲ್ಯಾಂಡ್ ಟ್ರಿಬ್ಯೂನಲ್ಗೆ ಅರ್ಜಿ ಸಲ್ಲಿಸಿದ್ದರು. ಅನಂತರ ಸುಮೋಟೋ ಪ್ರೊಫೋಸಲ್ (ಎಸ್.ಎಂ. ಪ್ರೊಫೋಸಲ್) ಸಿದ್ಧಪಡಿಸಲು ಗ್ರಾಮ ಕಚೇರಿಗೆ ಅರ್ಜಿ ಕಳುಹಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ನಾರಾಯಣನ್ ಲಂಚ ಕೇಳಿದ್ದಾರೆನ್ನಲಾಗಿದೆ. ಈ ಮಧ್ಯೆ ಕಾಸರಗೋಡು ತಾಲೂಕು ಕಚೇರಿಯಲ್ಲಿ ಚುನಾವಣಾ ವಿಭಾಗಕ್ಕೆ ವರ್ಗಾವಣೆಗೊಂಡ ನಾರಾಯಣನ್ ಹಣದೊಂದಿಗೆ ಅಲ್ಲಿಗೆ ಬರುವಂತೆ ರಮೇಶ್ರಲ್ಲಿ ತಿಳಿಸಿದ್ದರು. ಅದರಂತೆ ತಾಲೂಕು ಕಚೇರಿಗೆ ತಲುಪಿದ ದೂರುಗಾರನನ್ನು ಸೇರಿಸಿಕೊಂಡು ನಾರಾಯಣನ್ ತನ್ನ ಕಾರಿನಲ್ಲಿ ಕಲೆಕ್ಟರೇಟ್ನ ಲ್ಯಾಂಡ್ ಟ್ರಿಬ್ಯೂನಲ್ ಕಚೇರಿಗೆ ತೆರಳಿ ಮರಳಿ ಬರುತ್ತಿದ್ದಾಗ ತಾಲೂಕು ಕಚೇರಿಯ ಸಮೀಪದಲ್ಲಿ ನಾರಾಯಣನ್ರನ್ನು ಬಂಧಿಸಲಾಗಿದೆ. ಬಳಿಕ ಅವರನ್ನು ತಲಶ್ಶೇರಿ ವಿಜಿಲೆನ್ಸ್ ನ್ಯಾಯಾಲ ಯದಲ್ಲಿ ಹಾಜರುಪಡಿಸಲಾಯಿತು.