ಭೂಮಿ ವಿವಾದ ನ್ಯಾಯಾಲಯದಲ್ಲಿ: ಸರ್ವೀಸ್ ರಸ್ತೆ ನಿರ್ಮಾಣ ಮೊಟಕುಗೊಂಡು ಸ್ಥಳೀಯರಿಗೆ ಸಂಕಷ್ಟ

ಮೊಗ್ರಾಲ್: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಗತಿಯಲ್ಲಿ ರುವಂತೆ ಭೂಮಿ ವಸೂಲಾತಿ ಸಂ ಬಂಧಿಸಿದ ವಿವಾದಗಳು, ನ್ಯಾಯಾ ಲಯ ದಲ್ಲಿರುವ ಪ್ರಕರಣಗಳಲ್ಲಿ ತೀರ್ಪು ಉಂಟಾಗದಿರುವುದು ನಿರ್ಮಾಣ ಚಟುವಟಿಕೆಗಳು ಅರ್ಧದಲ್ಲೇ ಉಳಿಯಲು ಕಾರಣವಾಗಿದ್ದು, ಇದು ಸ್ಥಳೀಯರಿಗೆ ಸಮಸ್ಯೆ ಉಂಟು ಮಾಡುತ್ತಿದೆ. ಮೊಗ್ರಾಲ್ ಪೇಟೆಯ ಸಮೀಪ ವಸೂಲು ಮಾಡಿದ ಭೂಮಿಯ ನಷ್ಟಪರಿಹಾರಕ್ಕೆ ಸಂಬಂಧಪಟ್ಟ ವಿವಾದದಲ್ಲಿ ಮನೆ ಮಾಲಕ ಹೈಕೋರ್ಟ್‌ನ್ನು ಸಮೀಪಿಸಿದ್ದರು. ಈ ಹಿನ್ನೆಲೆಯಲ್ಲಿ ದೂರಿನಲ್ಲಿ ತೀರ್ಪು ಉಂಟಾಗದಿರುವ ಕಾರಣ ಈ ಭಾಗದಲ್ಲಿ ಹೆದ್ದಾರಿ ನಿರ್ಮಾಣ ಚಟುವಟಿಕೆಗಳು ನಡೆಸಬಾರದೆಂದು ನ್ಯಾಯಾಲಯ ನುಡಿದಿತ್ತು. ಸಮಸ್ಯೆ ಪರಿಹಾರಕ್ಕೆ ನ್ಯಾಯಾಲಯ ಜಿಲ್ಲಾಧಿಕಾರಿಗೆ ನಿರ್ದೇಶ ನೀಡಿತ್ತು. ಆದರೆ ಹಲವು ವರ್ಷಗಳು ಕಳೆದರೂ ವಿವಾದದಲ್ಲಿ ತೀರ್ಪು ಉಂಟಾಗಿಲ್ಲ. ಇದರಿಂದಾಗಿ ಈ ಮೂಲಕವಿರುವ ಸರ್ವೀಸ್ ರಸ್ತೆ, ಚರಂಡಿ ನಿರ್ಮಾಣ ಅರ್ಧದಲ್ಲೇ ಉಳಿದಿದ್ದು, ಇದು ಸ್ಥಳೀಯರಿಗೆ ಸಮಸ್ಯೆ ತಂದಿದೆ. ಮಳೆಗಾಲ ಆರಂಭಗೊಂಡಿ ರುವುದರೊಂದಿಗೆ ಚರಂಡಿಯ ನಿರ್ಮಾ ಣವಾಗದಿರುವುದು ಮಳೆನೀರು ಸಂ ಪೂರ್ಣವಾಗಿ ಮೊಗ್ರಾಲ್ ಪೇಟೆಯಲ್ಲೇ ಪೂರ್ತಿ ಗೊಂಡಿರುವ ಸರ್ವೀಸ್ ರಸ್ತೆಯಲ್ಲೇ ಹರಿಯುತ್ತಿದೆ. ಇದು ಸಮೀಪ ನಿವಾಸಿಗಳಿಗೆ, ವಿದ್ಯಾರ್ಥಿಗಳಿಗೆ, ಕಾಲ್ನಡೆ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುತ್ತಿದೆ.

ಈ ಪ್ರದೇಶದಲ್ಲಿ ಸರ್ವೀಸ್ ರಸ್ತೆಯ ನಿರ್ಮಾಣ ಮೊಟಕುಗೊಂ ಡಿರುವುದು ಸುಮಾರು ೫೦೦ ಮೀಟರ್‌ನಷ್ಟು ಅಂತರದಲ್ಲಾಗಿದೆ. ಕೊಪ್ಪಳಬಝಾರ್ ನಿಂದ ಆರಂಭಿಸಿ ನ್ಯಾಯಾಲಯವನ್ನು ಸಮೀಪಿಸಿದ ಮನೆ ಮಾಲಕನ ಪರಿಸರದವರೆಗೆ ಸರ್ವೀಸ್ ರಸ್ತೆ ನಿರ್ಮಾಣ ಮೊಟಕುಗೊಂಡಿದೆ. ಇದರಿಂದಾಗಿ ಹಲವಾರು ವ್ಯಾಪಾರ ಸಂಸ್ಥೆಗಳು, ಮನೆಮಂದಿಗಳಿಗೆ ಸಂಚಾರ ಸಂಕಷ್ಟ ಉಂಟಾಗಿದೆ. ಈ ವಿಷಯದಲ್ಲಿ ತುರ್ತು ಪರಿಹಾರ ಉಂಟಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page