ಮಂಗಲ್ಪಾಡಿ ಪಂಚಾಯತ್‌ನಲ್ಲಿ ರಾಶಿ ಬಿದ್ದಿರುವ ಕಡತಗಳಿಗೆ ಪರಿಹಾರ ಬೇಕು- ಆಡಳಿತ ಸಮಿತಿ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ಕಚೇರಿಯಲ್ಲಿ ರಾಶಿ ಬಿದ್ದಿರುವ ನೂರಾರು ಕಡತಗಳಲ್ಲಿ ತೀರ್ಪು ನೀಡಲು ತುರ್ತು ಕ್ರಮ ಕೈಗೊಳ್ಳಬೇ ಕೆಂದು ಪಂಚಾಯತ್ ಆಡಳಿತ ಸಮಿತಿ ಕುಂಬಳೆಯಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಆಗ್ರಹಿಸಿದೆ. ೩೫೦೦ರಷ್ಟು ಕಡತಗಳು ಕಚೇರಿಯಲ್ಲಿ ತೀರ್ಪಾಗದೆ ಉಳಿದಿದೆ. ನೌಕರರ ಕೊರತೆಯಿಂದ ೨೦೧೭ರಿಂದಿರುವ ಕಡತಗಳಿಗೆ ಪರಿಹಾರ ಕಾಣಲಾಗಿಲ್ಲ. ೧೦೦ರಷ್ಟು ಕಡತಗಳಲ್ಲಿ ಸಂಕೀರ್ಣತೆ ಇದ್ದರೂ ಉಳಿದ ಕಡತಗಳಿಗೆ  ಶಾಶ್ವತ ಪರಿಹಾರ ಉಂಟಾಗಬೇಕು. ಈ ಬೇಡಿಕೆ ಮುಂದಿಟ್ಟು ಆಡಳಿತ ಸಮಿತಿ ನಡೆಸುವ ಮುಷ್ಕರಕ್ಕೆ ಜನಬೆಂಬಲ ಹೆಚ್ಚಾಗುತ್ತಿದೆ. ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳು, ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿ ಸತ್ಯಾಗ್ರಹ ಚಪ್ಪರಕ್ಕೆ ತಲುಪುತ್ತಿದೆ. ಈಗ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಿದರೆ ಈ ಸಮಸ್ಯೆಗೆ ಪರಿಹಾರ ಉಂಟಾಗದು. ರಾಶಿ ಬಿದ್ದಿರುವ ಕಡತಗಳ ಪರಿಶೀಲನೆಗೆ ಪ್ರತ್ಯೇಕ ತಂಡವನ್ನು ನೇಮಕ ಮಾಡಬೇಕು. ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ನಗರಸಭೆಯಾಗಿ ಭಡ್ತಿಯಾಗಬೇಕಾದ ಪಂಚಾಯತ್ ಆಗಿದೆ ಮಂಗಲ್ಪಾಡಿ. ಈ ಎಲ್ಲಾ ಬೇಡಿಕೆಯನ್ನು ಮುಂದಿಟ್ಟು ನಡೆಸುವ ಮುಷ್ಕರವನ್ನು ಅವಗಣಿಸುವುದಾದರೆ ಸೆಕ್ರೆಟರಿಯೇಟ್ ಮುಂಭಾಗ ಧರಣಿ ನಡೆಸಲು ಆಡಳಿತ ಸಮಿತಿ ನಿರ್ಧರಿಸಿದೆ. ಈ ಬಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪಂ. ಅಧ್ಯಕ್ಷೆ ರುಬೀನ ನೌಫಲ್, ಉಪಾಧ್ಯಕ್ಷ ಯೂಸಫ್,  ಖೈರುನ್ನಿಸ, ಮುಹಮ್ಮದ್ ಹುಸೈನ್, ಮಜೀದ್ ಪಚ್ಚಂಬಳ, ಇರ್ಫಾನ ಇಕ್ಬಾಲ್, ಬಾಬು ಬಂದ್ಯೋಡು, ಕಿಶೋರ್ ಬಂದ್ಯೋಡು ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page