ಕಾಸರಗೋಡಿನಲ್ಲಿ ಉಣ್ಣಿತ್ತಾನ್ ಗೆಲುವು ಪುನರಾವರ್ತಿಸುವರೇ? ಜಯ ಎಂ.ವಿ. ಬಾಲಕೃಷ್ಣನ್‌ರಿಗಾಗಿರುವುದೇ? ಎಂ.ಎಲ್. ಅಶ್ವಿನಿ ಇತಿಹಾಸ ಸೃಷ್ಟಿಸುವರೇ?

ಕಾಸರಗೋಡು: ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಪಡಿ ಸುವುದರೊಂದಿಗೆ ವಿವಿಧ ರಾಜ ಕೀಯ ಪಕ್ಷಗಳು ಪ್ರಚಾರ ಚಟುವ ಟಿಕೆಯನ್ನು ಬಿರುಸುಗೊಳಿಸಿವೆ. ಕಾಸ ರಗೋಡು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಈ ಬಾರಿಯೂ ಯುಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ. ಬಾಲಕೃಷ್ಣನ್ ಎಲ್‌ಡಿಎಫ್ ಅಭ್ಯರ್ಥಿಯಾಗಿ ದ್ದಾರೆ. ಇದೇ ವೇಳೆ ಒ. ರಾಜಗೋ ಪಾಲ್, ಕೆ. ಸುರೇಂದ್ರನ್, ಸಿ.ಕೆ. ಪದ್ಮ ನಾಭನ್, ಪಿ.ಕೆ. ಕೃಷ್ಣದಾಸ್ ಮೊದಲಾದ ಹಿರಿಯ ನೇತಾರರು ಸ್ಪರ್ಧಿಸಿದ ಈ ಕ್ಷೇತ್ರದಲ್ಲಿ ಬಿಜೆಪಿ ಈ ಬಾರಿ ಕನ್ನಡತಿಯಾದ ಎಂ.ಎಲ್. ಅಶ್ವಿನಿ ಅವರನ್ನು ಚುನಾವಣಾ ಕಣಕ್ಕಿಳಿಸಿದೆ.

ಮೂರು ಒಕ್ಕೂಟಗಳು ಗೆಲುವಿನ ನಿರೀಕ್ಷೆಯಿರಿಸಿರುವ ಮಂಡಲ ಗಳಲ್ಲೊಂದಾಗಿದೆ ಕಾಸರಗೋಡು. ಮಂಜೇಶ್ವರ, ಕಾಸರಗೋಡು, ಉದುಮ, ಕಾಞಂಗಾಡ್, ತೃಕ್ಕರಿಪುರ, ಪಯ್ಯನ್ನೂರು, ಕಲ್ಯಾಶ್ಶೇರಿ ವಿಧಾನಸಭಾ ಕ್ಷೇತ್ರಗಳು ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಒಳಗೊಂಡಿವೆ.

ಎಲ್‌ಡಿಎಫ್‌ನ ಭದ್ರಕೋಟೆ ಯಾಗಿದ್ದ ಕಾಸರಗೋಡಿನಲ್ಲಿ  ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಯುಡಿಎಫ್ ಗೆಲುವು ಸಾಧಿಸಿತ್ತು. ಒಟ್ಟು ಚಲಾವಣೆಗೊಂಡ ಮತಗಳ ಪೈಕಿ ೪೭೪೯೬ ಮತಗಳ ಅಂತರದಲ್ಲಿ ರಾಜ್‌ಮೋಹನ್ ಉಣ್ಣಿತ್ತಾನ್ ಗೆಲುವು ಸಾಧಿಸಿದ್ದರು. ಅವರಿಗೆ ೪೩.೧೮ ಶೇ. ಮತ ಲಭಿಸಿತ್ತು. ಎಲ್‌ಡಿಎಫ್ ಅಭ್ಯರ್ಥಿ ಕೆ.ಪಿ. ಸತೀಶ್ಚಂದ್ರನ್‌ರಿಗೆ ೪೩೪೫೨೩ ಮತಗಳು (೩೯.೫ ಶೇ) ಅವರಿಗೆ ಲಭಿಸಿತ್ತು. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ರವೀಶ ತಂತ್ರಿ ಕುಂಟಾರು ಅವರಿಗೆ ೧,೭೬,೦೪೯ ಮತಗಳು ಲಭಿಸಿದೆ. ಇದೇ ವೇಳೆ ೪,೪೧೭ ಮv ಗಳು ನೋಟಾಕ್ಕೂ ಲಭಿಸಿತ್ತು. ಗೆಲುವು ಮತ್ತೊಮ್ಮೆ ನಮ್ಮ ಪಾಲಿಗೇ ಆಗಿರು ವುದೆಂದು ಉಣ್ಣಿತ್ತಾನ್ ಹಾಗೂ ಅವರ ಬೆಂಬಲಿಗರು ನಿರೀಕ್ಷೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಆ ನಿರೀಕ್ಷೆ ಹುಸಿಯಾಗಲಿದೆ ಎಂದೂ ಈ ಬಾರಿ ಗೆಲುವು ಎಲ್‌ಡಿಎಫ್‌ಗಾಗಿರುವುದೆಂದು ನೇತಾರರು ಹಾಗೂ ಕಾರ್ಯಕರ್ತರು ಅಭಿಪ್ರಾಯ ಪಡುತ್ತಿದ್ದಾರೆ.

ಆದರೆ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಏನು ಸಂಭವಿಸಲಿದೆ ಎಂಬ ಕುತೂಹಲ ಮತದಾರರದ್ದಾ ಗಿದೆ. ೨೦೨೧ರ ವಿಧಾನಸಭಾ ಚುನಾವಣೆ ಫಲಿತಾಂಶದ ಆಧಾರದಲ್ಲಿ ಎಲ್‌ಡಿಎಫ್ ೧,೬೯,೭೮೧ ಮತಗಳ ಮುಂದಿದೆ. ಮಂಜೇಶ್ವರ ಮಂಡಲದಲ್ಲಿ ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ೭೬೫ ಮತಗಳ ಅಂತರದಲ್ಲಿ  ಗೆಲುವು ಸಾಧಿಸಿದ್ದರು. ದ್ವಿತೀಯ ಸ್ಥಾನ ಬಿಜೆಪಿಗಾಗಿದೆ. ಕಾಸರಗೋಡು ಮಂಡಲದಲ್ಲಿ ಯುಡಿಎಫ್ ಅಭ್ಯರ್ಥಿ ಎನ್.ಎ. ನೆಲ್ಲಿಕುನ್ನು ೧೨,೯೦೧ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಇತರ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಸಾಧನೆಗೈದಿರುವುದು ಎಲ್‌ಡಿಎಫ್ ಆಗಿದೆ.

ಉದುಮ ದಲ್ಲಿ ಸಿ.ಎಚ್. ಕುಂಞಂಬು ೧೩,೩೨೨ ಮತ, ಕಾಞಂಗಾಡ್‌ನಲ್ಲಿ ಇ. ಚಂದ್ರಶೇಖರನ್ ೨೭,೧೩೯ ಮತ, ತೃಕ್ಕರಿಪುರದಲ್ಲಿ ಎಂ. ರಾಜಗೋ ಪಾಲನ್ ೨೬,೧೩೭ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಕಳೆದ ಲೋಕಸಭಾ ಚುನಾವಣೆ ಯಲ್ಲಿ ಎಲ್‌ಡಿಎಫ್‌ಗೆ ಮತ ಸೋರಿಕೆ ಉಂಟಾದ ಕಲ್ಯಾಶೇರಿ, ಪಯ್ಯನ್ನೂರು ಮಂಡಲಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಬಹುಮತವೇ ಲಭಿಸಿತ್ತು. ಪಯ್ಯನ್ನೂರಿ ನಲ್ಲಿ ಟಿ.ಐ. ಮಧುಸೂದನನ್ ೪೯,೭೮೦ ಮತಗಳ ಅಂತರದಲ್ಲೂ, ಕಲ್ಯಾಶೇರಿಯಲ್ಲಿ ಎಂ. ವಿಜಿನ್ ೪೪,೩೯೩ ಮತಗಳ ಅಂತರ ದಲ್ಲಿ ಗೆಲುವು ಸಾಧಿಸಿದ್ದರು. ಈ ಬಹು ಮತವೇ ಈ ಬಾರಿ ಎಲ್‌ಡಿ ಎಫ್‌ನ ಗೆಲುವಿನ ನಿರೀಕ್ಷೆಗೆ ಕಾರಣ ವಾಗಿದೆ.  ಈ ಸೀಟನ್ನು ಉಳಿಸಿಕೊಳ್ಳಲು ಯುಡಿಎಫ್ ಅವಿರತ ಪ್ರಯತ್ನಿಸುತ್ತಿ ರುವಾಗ ನಷ್ಟಗೊಂಡ ಮಂಡಲವನ್ನು ಮರಳಿ ಪಡೆಯಲು ಎಲ್‌ಡಿಎಫ್ ಕೂಡಾ ಭಾರೀ ಪ್ರಯತ್ನ ನಡೆಸುತ್ತಿದೆ. ಹೀಗಿರುವಾಗ ಗೆಲುವು ಯಾರಿಗಾಗಿ ರುವುದು?  ಈ ಎರಡೂ ಒಕ್ಕೂಟ ಗಳನ್ನು  ಪರಾಭವ ಗೊಳಿಸಲು ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಬಿಜೆಪಿಗೆ ಸಾಧ್ಯವಿದೆ ಯೇ? ಈ ಎಲ್ಲಾ ಸಂಶಯ ಗಳು ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಭಾರೀ ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *

You cannot copy content of this page