ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್‌ನ ನೂತನ ಕಟ್ಟಡ ಕೇಂದ್ರ ಸಚಿವೆಯಿಂದ ಲೋಕಾರ್ಪಣೆ: ಗೃಹ ವೈಭವ ಸಾಲಪತ್ರ ಬಿಡುಗಡೆ

ಉಪ್ಪಳ: ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್‌ನ ಶತಮಾನೋ ತ್ಸವದ ಆಚರಣೆ ಹಾಗೂ ಇದರ ಅಂ ಗವಾಗಿ ಸ್ಥಾಪಕರ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಎಲ್.ಆರ್ ಗುರು ಸಹಕಾರ ಸದನ ಹಾಗೂ ನೂತನ ಕೇಂದ್ರ ಕಚೇರಿಯ ಉದ್ಘಾ ಟನಾ ಸಮಾರಂಭ ಶನಿವಾರ ಜರ ಗಿತು. ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ನೂತನ ಕಟ್ಟಡದ ಉದ್ಘಾನೆಯನ್ನು ನೆರವೇರಿಸಿದರು. ಸಹಕಾರ ಬ್ಯಾಂಕ್ ಅಧಿಕಾರಿ ಚಂದ್ರನ್.ಎ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಸಚಿವೆ ಶೋಭಾ ಕರಂದ್ಲಾಜೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಸಹಕಾರಿ ವ್ಯವಸ್ಥೆ ಜನರಿಂದ ನಡೆಯುವುದಾಗಿದೆ.
ಸಹಕಾರಿ ವ್ಯವಸ್ಥೆಯ ಮೇಲೆ ನಂಬಿಕೆ ಭರವಸೆಯಿದೆ. ಈ ರೀತಿಯ ನಂಬಿಕೆಗಳ ಆಧಾರದಲ್ಲಿ ಸಮಾಜದ ಮುಂದೆ ಕಳೆದ ೧೦೦ ವರ್ಷಗಳಲ್ಲಿ ಸದ್ರೃಡವಾಗಿ ಬೆಳೆದು ಶತಮಾನೋತ್ಸವ ವನ್ನು ಆಚರಿಸಿರುವ ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ಕಾರ್ಯ ಸಮಾಜಕ್ಕೆ ಮಾದರಿ ಎಂದು ಅವರು ತಿಳಿಸಿದರು. ಸಹಕಾರಿ ಕ್ಷೇತ್ರದಲ್ಲಿ ಪಾರದರ್ಶಕತೆಯನ್ನು ತರುವುದಕ್ಕಾಗಿ ಕೇಂದ್ರದ ನರೇಂದ್ರ ಮೋದಿ ಸರಕಾರ ಬ್ಯಾಂಕಿAಗ್ ಕ್ಷೇತ್ರದಲ್ಲಿ ಅವ್ಯವಹಾರ, ಭ್ರಷ್ಟಾಚಾರ, ಮಧ್ಯವರ್ತಿಗಳ ಕಾಟ ತಪ್ಪಿಸುವುದಕ್ಕಾಗಿ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಎಂದರು. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಸಹಕಾರ ಬ್ಯಾಂಕ್ ಅಧಿಕಾರಿ ಲತ.ಟಿ.ಎಂ ಸಾಲಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಬಡ್ಡಿ ರಹಿತ ಗೃಹ ವೈಭವ ಸಾಲಪತ್ರ ವಿತರಣೆ ನಡೆಯಿತು. ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷೆ ರುಬೀನ ನೌಫಲ್, ಸಹಕಾರಿ ಬ್ಯಾಂಕ್ ಅಧಿಕಾರಿ ನಾಗೇಶ್.ಕೆ, ಮಂಗಲ್ಪಾಡಿ ಪಂಚಾ ಯತ್ ಸದಸ್ಯೆ ರೇವತಿ ಕಮಲಾಕ್ಷ, ಸುನಿಲ್ ಕುಮಾರ್.ಎ, ಸಹಕಾರಿ ಬ್ಯಾಂಕ್ ಅಧಿಕಾರಿ ವಿನೋದ್ ಕುಮಾರ್, ಕಾಸರಗೋಡು ಕೆ.ಸಿ.ಇ.ಎಫ್ ಅಧ್ಯಕ್ಷ ವಿನೋದ್ ಕುಮಾರ್, ಕರುಣಾಕರ ನಂಬ್ಯಾರ್, ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಿ.ವಿ ರಾಜನ್, ಮೊಹಮ್ಮದ್ ಹನೀಫ್, ಶಾಂತಾರಾಮ ಶೆಟ್ಟಿ, ಸುಬ್ಬಣ್ಣ ಭಟ್, ಜಯಂತ ಪಾಟಾಳಿ, ದಿನೇಶ್ ಐಲ, ವೀರಪ್ಪ ಅಂಬಾರ್, ಕೊರಗಪ್ಪ. ಎಸ್.ಶೆಟ್ಟಿ ಶುಭಾಂಶನೆಗೈದರು. ಈ ಸಂದರ್ಭದಲ್ಲಿ ಸಚಿವÉ ಶೋಭಾ ಕರಂದ್ಲಾಜೆ ರವರನ್ನು ಚೆರುಗೋಳಿ ನಾಗರಿಕರ ಪರವಾಗಿ ಸನ್ಮಾನಿಸಲಾ ಯಿತು. ಹಾಗೂ ಬ್ಯಾಂಕ್‌ಗೆ ಸ್ಥಳದಾನ ಗೈದ ಎಲ್.ಆರ್ ಗುರು ಕುಟುಂಬದ ಸದಸ್ಯೆ ಕಾಮಿನಿ ಪ್ರಕಾಶ್, ಬ್ಯಾಂಕ್‌ನ ಮಾಜಿ ಅಧ್ಯಕ್ಷರುಗಳಾದ ಅಶೋಕ್ ಕುಮಾರ್ ಹೊಳ್ಳ, ಪಿ.ಟಿ ಸುಬ್ಬಣ್ಣ ಶೆಟ್ಟಿ, ನಿವೃತ್ತ ಕಾರ್ಯದರ್ಶಿಗಳಾದ ಅನಂತ ತುಂಗ, ರಾಮಚಂದ್ರ, ಕೆ.ದಿನಕರ್ ರಾವ್, ಎಂ.ಭುಜAಗ ಶೆಟ್ಟಿ ಹಾಗೂ ನೂತನ ಕಟ್ಟಡ ನಿರ್ಮಾಣದ ಉದ್ಯೋಗಸ್ಥರಾದ ಶ್ರೀನಿವಾಸ ಪೈ, ಪ್ರಮೋದ್ ಕುಮಾರ್, ಎ.ಅನಂತಕೃಷ್ಣ ಮಯ್ಯ, ಸುದಿನ್ ಕುಮಾರ್ ಇಡಿಯ ರವರನ್ನು ಗೌರವಿಸಲಾಯಿತು. ನಿಶ್ಮಿತ, ಸುಶ್ಮಿತ, ಅನುಷ ಐಲ ಸಹಕಾರಿ ಗೀತೆ ಯನ್ನು ಹಾಡಿದರು. ಬ್ಯಾಂಕ್‌ನ ಗೌರ ವಾಧ್ಯಕ್ಷ ಎಂ.ಪಿ ಬಾಲಕೃಷ್ಣ ಶೆಟ್ಟಿ ಸ್ವಾಗತಿ ಸಿದರು. ಬ್ಯಾಂಕ್ ಅಧ್ಯಕ್ಷ ಪ್ರೇಂ ಮಾರ್.ಕೆ.ಪಿ ಐಲ ಪ್ರಾಸ್ತಾವಿಕ ಮಾತ ನಾಡಿದರು. ಬ್ಯಾಂಕ್ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಪಿ. ವಂದಿಸಿದರು. ಮೀರಾ ಆಳ್ವ ಮತ್ತು ಜಗದೀಶ ಪ್ರತಾಪ ನಗರ ನಿರೂಪಿಸಿದರು. ಕಾರ್ಯ ಕ್ರಮದ ಆರಂಭದಲ್ಲಿ ನಾದ ನಿನಾದ ಹಾಗೂ ಸಭಾ ಕಾರ್ಯಕ್ರಮದ ಬಳಿಕ ಶ್ರೀನಿವಾಸ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಿತು. ವಿವಿಧ ರಾಜ ಕೀಯ ನೇತಾರರು, ಧಾರ್ಮಿಕ ಮುಂ ದಾಳುಗಳು, ವಿವಿಧ ವಲಯಗಳ ಗಣ್ಯರು, ಊರವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You cannot copy content of this page