ಮಂಜೇಶ್ವರದಲ್ಲಿ ಜನರ ನಿದ್ದೆಗೆಡಿಸಿದ ತ್ಯಾಜ್ಯಗಳ ದುರ್ವಾಸನೆ, ಹೊಗೆ: ವಿಲೇವಾರಿಗೆ ಕ್ರಮ ಯಾವಾಗ? ಸ್ಥಳೀಯರ ಪ್ರಶ್ನೆ

ಮಂಜೇಶ್ವರ: ಮಂಜೇಶ್ವರದ ಎಲ್ಲಡೆ ತ್ಯಾಜ್ಯಗಳು ತುಂಬಿಕೊAಡಿದ್ದರೂ ವಿಲೇವಾರಿಗೆ ಕ್ರಮ ಇಲ್ಲದೆ ಗುಬ್ಬೆದ್ದು ನಾರುತ್ತಿದ್ದು ಜನರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ತ್ಯಾಜ್ಯ ವಿಲೇವಾರಿಗೆ ಪಂಚಾಯತ್ ಅಧಿಕೃತರು ನಿರ್ಲಕ್ಷ್ಯ ವಹಿಸುತ್ತಿರುವುದಾಗಿ ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರು ನಿರಂತರವಾಗಿ ಆರೋಪಿಸುತ್ತಲೇ ಇದ್ದಾರೆ. ಆದರೆ, ಸಮಸ್ಯೆಗೆ ಇಂದಿಗೂ ಪರಿಹಾರ ದೊರೆಯುತ್ತಿಲ್ಲ. ಮೊದಲು ಕರ್ನಾಟಕದಿಂದ ಆಗಮಿಸುತಿದ್ದ ಲಾರಿಯೊಂದು ಗುತ್ತಿಗೆ ಆಧಾರದಲ್ಲಿ ಮಂಜೇಶ್ವರದ ತ್ಯಾಜ್ಯಗಳನ್ನು ಕೊಂಡೊಯ್ಯುತಿತ್ತು. ಆದರೆ ಈ ಸಲ ಅದು ಕೂಡಾ ಇಲ್ಲದಾಗಿರುವುದಾಗಿ ಊರವರು ಹೇಳುತಿದ್ದಾರೆ. ಕುಂಜತ್ತೂರು – ಪದವು ರಸ್ತೆ, ಹೈಗ್ಲೋದಿ – ಪಾವೂರು ರಸ್ತೆ, ಮಾಲಿಂಗೇಶ್ವರ – ಕುಂಜತ್ತೂರು ರಸ್ತೆ ಹಾಗೂ ಮಂಜೇಶ್ವರದ ಹಲವೆಡೆಯ ಸಾರ್ವಜನಿಕ ಸ್ಥಳಗಳಲ್ಲಿ, ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ತ್ಯಾಜ್ಯಗಳ ರಾಶಿಗಳು ಗುಬ್ಬೆದ್ದು ನಾರುತಿದ್ದು, ಪ್ರದೇಶವೇ ದುರ್ಗಂಧಮಯವಾಗಿದೆ. ಪಂಚಾಯತ್‌ನ ವಿವಿದsೆ ಡೆ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುಡುತ್ತಿರುವುದು ಕಂಡು ಬರುತ್ತಿದೆ. ಇದರಿಂದ ವಾಯುಮಾಲಿನ್ಯ ಉಂಟಾಗಿ, ಜನರ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ವಿಷಯದಲ್ಲೂ ಪಂಚಾಯತ್ ಅಧಿಕಾರಿಗಳ ಮೌನ ಸ್ಥಳೀಯರ ಭಾರೀ ಆಕ್ರೋಶಕ್ಕೂ ಕಾರಣವಾಗಿದೆ.
ಇತ್ತೀಚೆಗೆ ಮಂಜೇಶ್ವರದ ಶಾಲೆಯೊಂದರಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಜಿಲ್ಲೆಯಿಂದ ಆಗಮಿಸಿದ ಶುಚಿತ್ವ ಮಿಶನ್ ಅಧಿಕಾರಿಗಳು ಹಾಗೂ ಇತರ ಉನ್ನತ ಅಧಿಕಾರಿಗಳು ಸಬೆs ಸೇರಿ ಮಂಜೇಶ್ವರವನ್ನು ತ್ಯಾಜ್ಯ ಮುಕ್ತಗೊಳಿಸುವುದಾಗಿ ತಿಳಿಸಿದ್ದರು. ಆದರÉ ಅದು ಕೂಡಾ ವಿಫಲಗೊಂಡಿರುವುದಾಗಿ ಸ್ಥಳೀಯರು ಹೇಳುತಿದ್ದಾರೆ. ಮಳೆಗಾಲ ಆರಂಭಗೊAಡರೆ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಇದೇ ಪರಿಸರದಿಂದ ಸಾಗಬೇಕಾಗಿದೆ. ಸಂಬAಧಪಟ್ಟವರು ಇನ್ನಾದರೂ ಕೂಡಲೇ ಇತ್ತ ಕಡೆ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page